ವಿದೇಶ

ಚೀನಾ ಹೊರತಾಗಿ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಐದು ರಾಷ್ಟ್ರಗಳಿಂದ ವಿರೋಧ

ಸಿಯೋಲ್​ನಲ್ಲಿ ನಡೆಯುತ್ತಿರುವ ಪರಮಾಣು ಪೂರೈಕೆದಾರರ ಸಮೂಹದ(ಎನ್​ಎಸ್​ಜಿ) ಸಭೆಯಲ್ಲಿ ಭಾರತಕ್ಕೆ ಸದಸ್ಯ ನೀಡುವ ಬಗ್ಗೆ ಇದುವರೆಗೂ...

ಚೀನಾ ಹೊರತಾಗಿ ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಐದು ರಾಷ್ಟ್ರಗಳಿಂದ ವಿರೋಧ
ನರೇಂದ್ರ ಮೋದಿ, ಕ್ಷಿ ಜಿನ್​ಪಿಂಗ್
Published On :
ಸಿಯೋಲ್: ಸಿಯೋಲ್​ನಲ್ಲಿ ನಡೆಯುತ್ತಿರುವ ಪರಮಾಣು ಪೂರೈಕೆದಾರರ ಸಮೂಹದ(ಎನ್​ಎಸ್​ಜಿ) ಸಭೆಯಲ್ಲಿ ಭಾರತಕ್ಕೆ ಸದಸ್ಯ ನೀಡುವ ಬಗ್ಗೆ ಇದುವರೆಗೂ ಒಮ್ಮತ ಮೂಡಿಲ್ಲ. 
ಎನ್ಎಸ್ ಜಿ ಸಭೆಯಲ್ಲಿ ಭಾರತಕ್ಕೆ ಚೀನಾ ಮಾತ್ರ ವಿರೋಧಿಯಲ್ಲ, ಇತರೆ ಐದು ರಾಷ್ಚ್ರಗಳು ಸಹ ವಿರೋಧಿಸಿವೆ. ಭಾರತಕ್ಕೆ ಎನ್ಎಸ್ ಜಿ ಸದಸ್ಯ ನೀಡಲು ನ್ಯೂಜಿಲೆಂಡ್, ಬ್ರೆಜಿಲ್, ಆಸ್ಟ್ರೇಲಿಯಾ, ಟರ್ಕಿ ಹಾಗೂ ಐರ್ಲೆಂಡ್ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಸಶಾಂಘೈಸಹಕಾರ ಒಕ್ಕೂಟ(ಎಸ್​ಸಿಒ)ದ ಶೃಂಗಸಭೆಯಲ್ಲಿ ಭಾಗವಹಿಸಲು ಇಂದು ಉಜ್ಬೆಕಿಸ್ತಾನಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಉಜ್ಬೆಕಿಸ್ತಾನದ ರಾಜಧಾನಿ ತಾಷ್ಕೆಂಟ್ ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರನ್ನು ಭೇಟಿ ಮಾಡಿದ್ದು, ಭಾರತದ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವಂತೆ ನೇರವಾಗಿಯೇ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜಿನ್ ಪಿಂಗ್ ಅವರು, ಅರ್ಹತೆಯನ್ನು ನೋಡಲಾಗುವುದು ಎಂದಿದ್ದಾರೆ.
(ಎನ್​ಎಸ್​ಜಿ) ಸಭೆಗೂ ಮುನ್ನ ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿದ ಮೋದಿ, ಎನ್​ಎಸ್​ಜಿ ಸದಸ್ಯತ್ವಕ್ಕಾಗಿ ಭಾರತ ನಡೆಸುತ್ತಿರುವ ಯತ್ನವನ್ನು ಚೀನಾವು ಪ್ರಾಮಾಣಿಕ ಹಾಗೂ ವಸ್ತುನಿಷ್ಠವಾಗಿ ಅಂದಾಜು ಮಾಡಬೇಕು. ಭಾರತದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಎಸ್​ಜಿಯಲ್ಲಿ ಮೂಡಿಬರುತ್ತಿರುವ ಸಹಮತದೊಂದಿಗೆ ಚೀನಾ ಸೇರಬೇಕು ಮತ್ತು ತನ್ನ ಕೊಡುಗೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
48 ರಾಷ್ಟ್ರಗಳು ಸದಸ್ಯತ್ವ ಹೊಂದಿರುವ ಪರಮಾಣು ಇಂಧನ ಪೂರೈಕೆ ಸಮೂಹದ(ಎನ್ಎಸ್ ಜಿ) ಸದಸ್ಯತ್ವಕ್ಕೆ ಭಾರತ ಮತ್ತು ಪಾಕಿಸ್ತಾನ ಅರ್ಜಿ ಸಲ್ಲಿಸಿದ್ದು, ಭಾರತದ ಅರ್ಜಿಯ ಬಗ್ಗೆ ಇಂದು ವಿಶೇಷ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.