ವಿಶ್ವಾದ್ಯಂತ ಗರಿಗೆದರಿದ ಯೋಗ ಸಂಭ್ರಮ, 192 ರಾಷ್ಟ್ರಗಳಲ್ಲಿ ಯೋಗ ದಿನಾಚರಣೆ
2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಾದ್ಯಂತ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ವಿಶ್ವದ ಸುಮಾರು 192 ರಾಷ್ಟ್ರಗಳಲ್ಲಿ ಮಂಗಳವಾರ ಯೋಗದಿನ ಆಚರಿಸಲಾಗುತ್ತಿದೆ...

ನ್ಯೂಯಾರ್ಕ್: 2ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವಾದ್ಯಂತ ವಿದ್ಯುಕ್ತ ಚಾಲನೆ ನೀಡಲಾಗಿದ್ದು, ವಿಶ್ವದ ಸುಮಾರು 192 ರಾಷ್ಟ್ರಗಳಲ್ಲಿ ಮಂಗಳವಾರ ಯೋಗದಿನ ಆಚರಿಸಲಾಗುತ್ತಿದೆ.
ಅಮೆರಿಕ, ಇಂಗ್ಲೆಂಡ್, ಆಫ್ಘಾನಿಸ್ತಾನ ಸೇರಿದಂತೆ ಒಟ್ಟು ಸುಮಾರು 192 ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಯೋಗದಿನಕ್ಕೆ ಚಾಲನೆ ನೀಡಲಾಗಿದೆ. ಕಳೆದ ಜೂನ್ 21ರಂದು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ನೀಡಿತ್ತು. ಅಲ್ಲದೆ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಣೆ ಮಾಡಿತ್ತು. ಅದರ ಫಲವಾಗಿ ಇಂದು ವಿಶ್ವಾದ್ಯಂತ 2ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.
ನ್ಯೂಯಾರ್ಕ್ ನಲ್ಲಿ ಕಿಕ್ಕಿರಿದ ಜನಸ್ತೋಮದಿಂದ ಯೋಗ
ಇನ್ನು ವಿಶ್ವದ ಅತ್ಯಂತ ಜನದಟ್ಟಣೆ ನಗರವೆಂದೇ ಖ್ಯಾತವಾದ ನ್ಯೂಯಾರ್ಕ್ ನ ಹೃದಯ ಭಾಗವಾದ ಟೈಮ್ಸ್ ಸ್ಕ್ವೇರ್ನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿ ಯೋಗ ಮಾಡುವ ಮೂಲಕ ಯೋಗದಿನಕ್ಕೆ ಮೆರುಗು ತಂದರು. ವಿಶ್ವಸಂಸ್ಥೆ ನೀಡಿದ ಕರೆಗೆ ಮುಕ್ತವಾಗಿ ಸಂದಿಸಿದ ಮಹಾನಗರದ ಜನತೆ ಯೋಗದಿಂದ ಜೀವನ ಸುಗಮ ಎಂಬ ಸಂದೇಶ ಸಾರಿದರು. ಯೋಗ ಶಿಕ್ಷಕರು ನೀಡಿದ ಸೂಚನೆಗೆ ಅನುಗುಣವಾಗಿ ಆಸನಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ವರ್ಷದ ಅತಿ ಸುದೀರ್ಘ ದಿನಕ್ಕೆ ಅಮೆರಿಕನ್ನರು ಯೋಗಾಭ್ಯಾಸದ ಮೂಲಕ ಸ್ವಾಗತಿಸಿ, ಸಂಭ್ರಮಿಸಿದ್ದು ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


