ಭಾರತದ ಎನ್ಎಸ್ ಜಿ ಅಗತ್ಯತೆ ಅರ್ಥವಾಗುತ್ತೆ, ಆದರೆ ಹೆಚ್ಚಿನ ಚರ್ಚೆಯಾಗಬೇಕು: ಚೀನಾ
ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದ ಸದಸ್ಯತ್ವಕ್ಕೆ ತನ್ನ ವಿರೋಧವನ್ನು ಮುಂದುವರೆಸಿರುವ ಚೀನಾ, ಭಾರತ ಅಥವಾ ಇತರೆ ದೇಶಕ್ಕೆ...

Published On :
ಬೀಜಿಂಗ್: ಭಾರತದ ಪರಮಾಣು ಪೂರೈಕೆದಾರರ ಒಕ್ಕೂಟ(ಎನ್‌ಎಸ್‌ಜಿ)ದ ಸದಸ್ಯತ್ವಕ್ಕೆ ತನ್ನ ವಿರೋಧವನ್ನು ಮುಂದುವರೆಸಿರುವ ಚೀನಾ, ಭಾರತ ಅಥವಾ ಇತರೆ ದೇಶಕ್ಕೆ ಎನ್‌ಎಸ್‌ಜಿ ಸದಸ್ಯತ್ವ ನೀಡುವ ಬಗ್ಗೆ ವಿಸ್ತೃತ ಚರ್ಚೆಯಾಗಲಿ ಎಂದು ಮಂಗಳವಾರ ಕರೆ ನೀಡಿದೆ.
ಭಾರತಕ್ಕೆ ಎನ್ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡುವುದಕ್ಕೆ ಸಂಬಂಧಿಸಿದಂತೆ ಇಂದು ಚೀನಾದ ನಿಲವು ಸ್ಪಷ್ಟಪಡಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುಯಿಂಗ್ ಅವರು, ಪರಮಾಣು ವಿದ್ಯುತ್ ಉತ್ಪಾದನೆಗಾಗಿ ಭಾರತದ ಎನ್ಎಸ್ ಜಿ ಸದಸ್ಯತ್ವದ ಅಗತ್ಯತೆ ನಮಗೂ ಅರ್ಥವಾಗಿದೆ. ಆದರೆ ಆ ಬಗ್ಗೆ 48 ಸದಸ್ಯ ರಾಷ್ಟ್ರಗಳೊಂದಿಗೆ ವಿಸ್ತೃತ ಚರ್ಚೆ ಮಾಡುವ ಅಗತ್ಯ ಇದೆ ಎಂದಿದ್ದಾರೆ. ಅಲ್ಲದೆ ಭಾರತಕ್ಕೆ ಎನ್ ಎಸ್ ಜಿ ಸದಸ್ಯ ನೀಡುವ ಬಗ್ಗೆ ಒಕ್ಕೂಟ ಸದಸ್ಯರಲ್ಲೇ ಭಿನ್ನಾಭಿಪ್ರಾಯವಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಜೂನ್ 24ರಂದು ಸಿಯೋಲ್ ನಲ್ಲಿ ನಡೆಯುವ 48 ಸದಸ್ಯರ ಎನ್ಎಸ್ ಜಿ ಸಭೆಯ ಕಾರ್ಯಸೂಚಿಯಲ್ಲಿ ಭಾರತಕ್ಕೆ ಸದಸ್ಯತ್ವ ನೀಡುವ ಪ್ರಸ್ತಾಪ ಇಲ್ಲ ಎಂದು ಚುಯಿಂಗ್ ಸ್ಪಷ್ಟಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


