ಶ್ವೇತ ಭವನದಲ್ಲಿ ಬರಾಕ್ ಒಬಾಮ- ದಲೈ ಲಾಮ ಭೇಟಿ
ಅಮೆರಿಕ ಅಧ್ಯಕ್ಷರನ್ನು ಟಿಬೆಟ್, ಬೌದ್ಧ ಧರ್ಮ ಗುರು ದಲೈ ಲಾಮ ಶ್ವೇತ ಭವನದಲ್ಲಿ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಚೀನಾದ ಅಧಿಕಾರಿ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ.

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷರನ್ನು ಟಿಬೆಟ್, ಬೌದ್ಧ ಧರ್ಮ ಗುರು ದಲೈ ಲಾಮ ಶ್ವೇತ ಭವನದಲ್ಲಿ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಚೀನಾದ ಅಧಿಕಾರಿ ವರ್ಗದ ಕೆಂಗಣ್ಣಿಗೆ ಗುರಿಯಾಗಿದೆ.
ದಲೈ ಲಾಮ ಅವರನ್ನು ಚೀನಾ ಟಿಬೆಟ್ ನ ಪ್ರತ್ಯೇಕತಾವಾದದ ಚಳುವಳಿಯ ನಾಯಕ ಎಂದೇ ಗುರುತಿಸಿದ್ದು, ದಲೈ ಲಾಮ ಅಮೆರಿಕ ಅಧ್ಯಕ್ಷರೊಂದಿಗೆ ರಹಸ್ಯ ಮಾತುಕತೆ ನಡೆಸಿದ್ದಾರೆ. ದಲೈ ಲಾಮ ಹಾಗೂ ಅಮೆರಿಕ ಅಧ್ಯಕ್ಷರ ನಡುವಿನ ಮಾತುಕತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೋಶ ಎರ್ನೆಸ್ಟ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ದ್ವಿಪಕ್ಷೀಯ ಮಾತುಕತೆಗಿಂತ ಹೆಚ್ಚು ವೈಯಕ್ತಿಕ ಕುಅಶಲೋಪರಿ ಬಗ್ಗೆ ಕೆಂದ್ರೀಕೃತವಾಗಿತ್ತು ಎಂದಿದ್ದು ಹೆಚ್ಚಿನ ಮಾಹಿತಿ ನೀಡುವುದಕ್ಕೆ ನಿರಾಕರಿಸಿದ್ದಾರೆ. ಒಬಾಮ- ದಲೈ ಲಾಮ ಅವರ ಮಾತುಕತೆ ವೇಳೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದ ಕಾರಣ ಹೆಚ್ಚಿನ ಮಾತುಕತೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಉಭಯ ನಾಯಕರೂ ಮಾನವ ಹಕ್ಕುಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಶ್ವೇತ ಭವನ ಹೇಳಿದೆ. ದಲೈಲಾಮ ಭೇಟಿಯಿಂದಾಗಿ ಅಮೆರಿಕ ಬೆಂಬಲಿಸುತ್ತಿರುವ ಒಂದೇ ಚೀನಾ ನೀತಿಗೆ ಈ ಭೇಟಿಯಿಂದ ಧಕ್ಕೆ ಉಂಟಾಗಬಾರದು ಎಂದು ಎಚ್ಚರಿಕೆ ನೀಡಿದ್ದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


