ವಿದೇಶ

ಅಮೆರಿಕಾದಲ್ಲೇ ಉತ್ತರ ಕೊರಿಯಾದ ಕಿಮ್ ಜಾಂಗ್-ಅನ್ ಭೇಟಿ ಮಾಡುತ್ತೇನೆ: ಟ್ರಂಪ್

ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಅನ್ ಅವರನ್ನು ಅಮೆರಿಕಾಕ್ಕೆ ಆಹ್ವಾನಿಸಲಿದ್ದೇನೆ ಆದರೆ

ಅಮೆರಿಕಾದಲ್ಲೇ ಉತ್ತರ ಕೊರಿಯಾದ ಕಿಮ್ ಜಾಂಗ್-ಅನ್ ಭೇಟಿ ಮಾಡುತ್ತೇನೆ: ಟ್ರಂಪ್
ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್
Published On :

ವಾಶಿಂಗ್ಟನ್: ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸಂಭವನೀಯ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್, ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಅನ್ ಅವರನ್ನು ಅಮೆರಿಕಾಕ್ಕೆ ಆಹ್ವಾನಿಸಲಿದ್ದೇನೆ ಆದರೆ ಅಧಿಕೃತ ಸರ್ಕಾರಿ ಔತಣಕೂಟಕ್ಕಲ್ಲ ಎಂದಿದ್ದಾರೆ.

ಇದಕ್ಕೂ ಮುಂಚಿತವಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿರುವ ಹಿಲರಿ ಕ್ಲಿಂಟನ್ - ಟ್ರಂಪ್, ಕಿಮ್ ಜೊತೆ ಮಾತುಕತೆ ನಡೆಸುವುದಕ್ಕೆ ಉತ್ಸುಕರಾಗಿರುವುದನ್ನು ಟೀಕಿಸಿದ್ದರು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ಉದ್ದಿಮೆ ದೈತ್ಯ, ಮಾಜಿ ಶ್ವೇತಭವನದ ಕಾರ್ಯದರ್ಶಿಗೆ ಪ್ರೌಢತೆ ಇಲ್ಲ ಎಂದಿದ್ದಾರೆ.

"ಅವರು ಇದನ್ನೇ ಮಾಡುತ್ತಿದ್ದು ಆವರಿಗೆ ಇವೆಲ್ಲವೂ ಅರ್ಥವಾಗುವುದಿಲ್ಲ" ಎಂದು ಟ್ರಂಪ್ ಅಟ್ಲಾಂಟಾದಲ್ಲಿ ನಡೆದ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ.

"ಮಾತನಾಡುವುದರಲ್ಲಿ ತಪ್ಪೇನಿದೆ? ಇದನ್ನು ಸೌಹಾರ್ದತೆ ಬೆಳೆಸಲು ಮಾತುಕತೆ ಎನ್ನಲಾಗುತ್ತದೆ" ಎಂದಿರುವ ಅವರು ಈ ಭೇಟಿ ಸಾಧ್ಯವಾಗದೆ ಕೂಡ ಇರಬಹುದು ಎಂದು ಕೂಡ ಅವರು ಊಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.