ಅಮೆರಿಕಾ ನೇತೃತ್ವದ ವಾಯು ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಆಲ್-ಬಗ್ದಾದಿ ಹತ: ವರದಿ
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನ ಮುಖ್ಯಸ್ಥ ಅಬು ಬಕ್ರ್ ಆಲ್-ಬಗ್ಧಾದಿ ಯನ್ನು ಅಮೇರಿಕಾ ಮುಂದಾಳತ್ವದ ಮಿತ್ರ ದೇಶಗಳ ವಾಯು ದಾಳಿಯಲ್ಲಿ

ರೋಮ್: ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಸಿಸ್) ನ ಮುಖ್ಯಸ್ಥ ಅಬು ಬಕ್ರ್ ಆಲ್-ಬಗ್ಧಾದಿ ಯನ್ನು ಅಮೇರಿಕಾ ಮುಂದಾಳತ್ವದ ಮಿತ್ರ ದೇಶಗಳ ವಾಯು ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಸೋಮವಾರ ವರದಿಯಾಗಿದೆ.
ಇಸ್ಲಾಮಿಕ್ ಸ್ಟೇಟ್ ನ ಹಿಡಿತದಲ್ಲಿರುವ ಉತ್ತರ ಸಿರಿಯಾದ ರಕ್ಕಾದಲ್ಲಿ ಬಾಗ್ಧಾದಿ ಹತ್ಯೆಯಾಗಿದ್ದಾನೆ ಎಂದು ಇರಾನ್ ರಾಷ್ಟ್ರದ ಮಾಧ್ಯಮ ಸಂಸ್ಥೆ ಮತ್ತು ಟರ್ಕಿಶ್ ಸರ್ಕಾರದ ಪರವಾಗಿರುವ ದಿನ ಪತ್ರಿಕೆ ಯೆನಿಸ್ ಸಫಕ್, ಅರೇಬಿಕ್ ನ್ಯೂಸ್ ಏಜೆನ್ಸಿ ಅಲ್-ಅಮಕ್ ವರದಿಯನ್ನುದೇಶಿಸಿ ಹೇಳಿದೆ.
ಅಮಕ್ ನಲ್ಲಿ ಪ್ರಕಟವಾಗಿರುವ ಹೇಳಿಕೆಯ ಪ್ರಕಾರ ಇಸ್ಲಾಮಿಕ್ ಸ್ಟೇಟ್ 'ಕ್ಯಾಲಿಫ್' ಬಾಗ್ಧಾದಿಯನ್ನು ಸೋಮವಾರ ಹತ್ಯೆ ಮಾಡಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
"ರಂಜಾನ್ ನ ಐದನೇ ದಿನದಂದು ರಕ್ಕಾದಲ್ಲಿ ಮಿತ್ರ ರಾಷ್ಟ್ರಗಳು ನಡೆಸಿದ ವಾಯು ದಾಳಿಯಲ್ಲಿ ಅಬು ಬಕ್ರ್ ಅಲ್-ಬಗ್ಧಾದಿ ಹತನಾಗಿದ್ದಾನೆ" ಎಂದು ಹೇಳಿಕೆ ತಿಳಿಸಿದೆ.
ಮಿತ್ರ ರಾಷ್ಟ್ರಗಳು ಇದರ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಇದಕ್ಕೂ ಮುಂಚಿತವಾಗಿ ಸೋಮವಾರ ಇರಾಕಿ ಟಿ ವಿ ವಾಹಿನಿ 'ಅಲ್-ಸುಮಾರಿಯಾ' ಪ್ರಕಾರ ಇಸ್ಲಾಮಿಕ್ ಸ್ಟೇಟ್ ಹಿಡಿತದಲ್ಲಿರುವ ಮೋಸುಲ್ ನಗರದಿಂದ ೬೫ ಕಿಲೋ ಮೀಟರ್ ದೂರದಲ್ಲಿ ನಡೆದ ಮಿತ್ರಪಕ್ಷಗಳ ವಾಯುದಾಳಿಗೆ ಬಾಗ್ಧಾದಿ ಗಾಯಗೊಂಡಿದ್ದಾನೆ ಎಂದಿತ್ತು.
ತನ್ನ ತಲೆಗೆ ೨೫ ಮಿಲಯನ್ ಬಹುಮಾನ ಹೊಂದಿರುವ ಬಾಗ್ಧಾದಿ ಕಳೆದ ೬ ತಿಂಗಳಿನಿಂದ ವಾಸಸ್ಥಾನ ಬದಲಿಸುತ್ತಿದ್ದು, ಮೋಸುಲ್ ಗೆ ಪ್ರಯಾಣ ಬೆಳೆಸಿದ್ದರ ಬಗ್ಗೆ ಅಮೆರಿಕಾ ಬೇಹುಗಾರಿಕಾ ಸಂಸ್ಥೆಗಳಿಗೆ ನಂಬಲಾರ್ಹ ಸುದ್ದಿ ಸಿಕ್ಕಿರುವುದಾಗಿ ಕೆಲವು ಭದ್ರತಾ ಅಧಿಕಾರಿಗಳು ಹೇಳಿರುವುದಾಗ ಅಮೆರಿಕಾದ ಟಿವಿ ವಾಹಿನಿ ಸಿ ಎನ್ ಎನ್ ಸೋಮವಾರ ಪ್ರಸಾರ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


