ವಿದೇಶ

ಭಾರತ ಅಮೆರಿಕಗೆ ಶ್ರೇಷ್ಠ ಮಿತ್ರ, ಪ್ರಧಾನಿ ಮೋದಿಯಿಂದ ಅಗತ್ಯ ಸುಧಾರಣೆ: ಅಮೆರಿಕ ಸ್ಪೀಕರ್

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಕಾಂಗ್ರೆಸ್ ನ್ನು ಉದ್ದೇಶಿಸಿ ಮಾತನಾಡಿ ಭಾರತಕ್ಕೆ ಬಂದು ಎರಡು ದಿನಗಳು ಕಳೆದಿದ್ದರೂ ಅಮೆರಿಕದಲ್ಲಿ ಮೋದಿ ಭಾಷಣದ ಹವಾ ಇನ್ನೂ ಮುಂದುವರೆದಿದೆ.

ಭಾರತ ಅಮೆರಿಕಗೆ ಶ್ರೇಷ್ಠ ಮಿತ್ರ, ಪ್ರಧಾನಿ ಮೋದಿಯಿಂದ ಅಗತ್ಯ ಸುಧಾರಣೆ: ಅಮೆರಿಕ ಸ್ಪೀಕರ್
ಸ್ಪೀಕರ್ ಪೌಲ್ ರಯಾನ್
Published On :

ವಾಷಿಂಗ್ ಟನ್: ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಕಾಂಗ್ರೆಸ್ ನ್ನು ಉದ್ದೇಶಿಸಿ ಮಾತನಾಡಿ ಭಾರತಕ್ಕೆ ಬಂದು ಎರಡು ದಿನಗಳು ಕಳೆದಿದ್ದರೂ ಅಮೆರಿಕದಲ್ಲಿ ಮೋದಿ ಭಾಷಣದ ಹವಾ ಇನ್ನೂ ಮುಂದುವರೆದಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಮೋದಿ ಭಾಷಣದ ಬಗ್ಗೆ ವಿದೇಶಾಂಗ ವ್ಯವಹಾರಗಳ ಪರಿಷತ್ ನಲ್ಲಿ ಮಾತನಾಡಿರುವ ಅಮೆರಿಕದ ಹೌಸ್ ಆಫ್ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್ ನ ಸ್ಪೀಕರ್  ಪೌಲ್ ರಯಾನ್, ಭಾರತ ಅಮೆರಿಕಗೆ ಶ್ರೇಷ್ಠ ಮಿತ್ರ ರಾಷ್ತ್ರವಾಗಿದ್ದು, ಈ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಗೊಳಿಸಬೇಕಿದೆ ಎಂದು ಪೌಲ್ ರಯಾನ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ನ್ನುದ್ದೇಶಿಸಿ ಮಾತನಾಡುವುದಕ್ಕೂ ಮುನ್ನ ಮೋದಿ ತಮ್ಮೊಂದಿಗೆ ಮಾತನಾಡಿದ್ದನ್ನು ನೆನಪಿಸಿಕೊಂಡ ಪೌಲ್ ರಯಾನ್, ಮೋದಿ ನೇತೃತ್ವದ ಭಾರತ ಸರ್ಕಾರ ಅಮೆರಿಕಗೆ ಶ್ರೇಷ್ಠ ಮಿತ್ರ ರಾಷ್ಟ್ರವಾಗಿದ್ದು, ಈ ಬಾಂಧವ್ಯವವನ್ನು ಮತ್ತಷ್ಟು ವೃದ್ಧಿಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

ಬರಾಕ್ ಒಬಾಮ ಅವರ ನೀತಿಗಳನ್ನು ಸಾಮಾನ್ಯವಾಗಿ ಟೀಕಿಸುವ ಪೌಲ್ ರಯಾನ್, ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಸೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದು ಹಿಂದೂ ಮಹಾಸಾಗರ, ಪೆಸಿಫಿಕ್ ಕಡಲ ಭವಿಷ್ಯತ್ ಗೆ ಸಂಬಂಧಿಸಿದಂತೆ ಹಾಗೂ ಚೀನಾ ಮೇಲೆ ಕಣ್ಗಾವಲಿಡಲು ಭಾರತ- ಅಮೆರಿಕ ಹೆಚ್ಚು ಸಾಮರ್ಥ್ಯ ಹೊಂದಿವೆ ಎಂದು ಬಣ್ಣಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಗತ್ಯ ಸುಧಾರಣೆಗಳನ್ನು ತರುತ್ತಿದ್ದಾರೆ, ಸಾಮಾನ್ಯವಾಗಿ ಒಬಾಮ ಅವರ 8 ವರ್ಷಗಳ ಆಡಳಿತದ ವಿದೇಶಾಂಗ ನೀತಿಗಳನ್ನು ಟೀಕಿಸುತ್ತೇನೆ ಆದರೆ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧ ಬೆಳವಣಿಗೆ ಟೀಕೆಗೆ ಹೊರತಾಗಿದ್ದು, ಒಬಾಮ ಅವರ ಟೀಕೆಗೆ ತದ್ವಿರುದ್ಧವಾಗಿದೆ, ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳನ್ನು ನಿರ್ಲಕ್ಷ್ಯಿಸಿ, ಶತೃಗಳನ್ನು ಪುರಸ್ಕರಿಸಿದೆ, ಆದರೆ ಭಾರತದೊಂದಿಗೆ ಉತ್ತಮವಾದ ಸಂಬಂಧ ಬೆಳೆಸಿರುವುದು ಇದಕ್ಕೆ ಅಪವಾದ ಎಂದು ಪೌಲ್ ರಯಾನ್ ವಿದೇಶಾಂಗ ವ್ಯವಹಾರಗಳ ಪರಿಷತ್ ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.