ರಂಜಾನ್ ಸಮಯದಲ್ಲಿ ಮದ್ಯ ಉಪಚಾರ; ಫ್ರೆಂಚ್ ಪರಿಚಾರಕಿ ಮೇಲೆ ಹಲ್ಲೆ
ರಂಜಾನ್ ನ ಮೊದಲನೆಯ ದಿನದಂದು ಮದ್ಯ ಉಪಚಾರ ನಿಲ್ಲಿಸಿಲ್ಲವೆಂದು ನೈಸ್ ಕಫೆಯ ಪರಿಚಾರಕಿಯ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿದ್ದಾರೆ.

ಲಂಡನ್: ರಂಜಾನ್ ನ ಮೊದಲನೆಯ ದಿನದಂದು ಮದ್ಯ ಉಪಚಾರ ನಿಲ್ಲಿಸಿಲ್ಲವೆಂದು ನೈಸ್ ಕಫೆಯ ಪರಿಚಾರಕಿಯ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿದ್ದಾರೆ.
ಟುನ್ಶಿಯಾ ಮೂಲದ ೩೦ ವರ್ಷದ ಫ್ರೆಂಚ್ ಪರಿಚಾರಕಿ, ಕಫೆಯ ಟೆರೇಸ್ ಮೇಲೆ ಮದ್ಯ ಉಪಚಾರ ಮಾಡುವಾಗ ಬಂದೆರಗಿದ ಇಬ್ಬರು ಪುರುಷರು, ಅವಾಚ್ಯ ಶಬ್ದಗಳಿಂದ ಬೈದು, ಪವಿತ್ರ ತಿಂಗಳಲ್ಲಿ ಮದ್ಯ ಉಪಚಾರ ಮಾಡುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ನಿಂದಿಸಿದ್ದಾರೆ.
ಮುಸ್ಲಿಂ ಸಮುದಾಯದ ವ್ಯಕ್ತಿಯಾಗಿರುವ ಪರಿಚಾರಕಿ ಹೇಳಿರುವಂತೆ ಆ ಇಬ್ಬರು "ನಾವು ದೇವರಾಗಿದ್ದರೆ ನಿನ್ನನ್ನು ನೇಣಿಗೆ ಹಾಕುತ್ತಿದ್ದೆ" ಎಂದು ಕೂಡ ಹೇಳಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಪರಿಚಾರಕಿ "ನನ್ನನ್ನು ಕಟಕಟೆಗೆ ನಿಲ್ಲಿಸಲು ನೀವು ದೇವರಲ್ಲ" ಎಂದು ಹಿಂತಿರುಗಿ ಹೇಳಿದ್ದಾಗಿ ತಿಳಿಸುತ್ತಾರೆ.
ನಂತರ ಇಬ್ಬರಲ್ಲಿ ಒಬ್ಬ ಮಹಿಳೆಯೆಡೆಗೆ ನುಗ್ಗಿ ಅವರ ಕಪಾಳಕ್ಕೆ ಬಾರಿಸಿ ಬೀಳಿಸಿದ್ದು ಕೂಡ ಕಫೆಯ ಸಿ ಸಿ ಟಿ ವಿಯಲ್ಲಿ ಚಿತ್ರೀಕರಣಗೊಂಡಿದೆ.
ಪರಿಚಾರಕಿ ಪೊಲೀಸ್ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


