ವಿದೇಶ

ಗಗನಯಾತ್ರಿ ದಿ. ಕಲ್ಪನಾ ಚಾವ್ಲಾಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ

ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ದಿ. ಕಲ್ಪನಾ ಚಾವ್ಲಾ....

ಗಗನಯಾತ್ರಿ ದಿ. ಕಲ್ಪನಾ ಚಾವ್ಲಾಗೆ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಕಲ್ಪನಾ ಚಾವ್ಲಾ ಸಮಾಧಿಗೆ ಗೌರವ ಸಲ್ಲಿಸುತ್ತಿರುವ ಪ್ರಧಾನಿ
Published On :
ವಾಷಿಂಗ್ಟನ್: ಐದು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ದಿ. ಕಲ್ಪನಾ ಚಾವ್ಲಾ ಅವರ ಸಮಾಧಿಗೆ ತೆರಳಿ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸುವ ಮೂಲಕ ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಆರಂಭಿಸಿದ್ದಾರೆ.
ಸಮಾಧಿಗೆ ಗೌರವ ಸಲ್ಲಿಸಿದ ನಂತರ ಕಲ್ಪನಾ ಚಾವ್ಲಾ ಅವರ ಪತಿ, ಕುಟುಂಬ ಸದಸ್ಯರು ಮತ್ತು ನಾಸಾದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಧಾನಿ ಮಾತುಕತೆ ನಡೆಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವೀಟ್ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಸಂಜಾತೆ ಅಮೆರಿಕದ ಗಗನಯಾತ್ರಿ ಸುನಿತಾ ವಿಲಿಯಮ್್ಸ ಮತ್ತು ಅವರ ಕುಟುಂಬ ಸದಸ್ಯರನ್ನೂ ಸಹ ಪ್ರಧಾನಿ ಭೇಟಿ ಮಾಡಿ ಮಾತುಕತೆ ನಡೆಸಿದರು.
ಮೋದಿ ಅವರು ನನ್ನ ತಂದೆಯೊಂದಿಗೆ ಗುಜರಾತಿಯಲ್ಲಿ ಮಾತನಾಡಿದರು. ನನ್ನ ತಂದೆಯನ್ನು ಭಾರತಕ್ಕೆ ಭೇಟಿ ನೀಡಲು ಆಹ್ವಾನಿಸಿದ್ದಾರೆ. ಆರೋಗ್ಯ ಸುಧಾರಿಸಿದ ನಂತರ ಭಾರತಕ್ಕೆ ಆಗಮಿಸುವುದಾಗಿ ನನ್ನ ತಂದೆ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಸಂತಸದ ವಿಷಯ ಎಂದು ಸುನಿತಾ ವಿಲಿಯಮ್್ಸ ತಿಳಿಸಿದ್ದಾರೆ.
ಕಲ್ಪನಾ ಚಾವ್ಲಾ ಅಂತರಿಕ್ಷ ಯಾತ್ರೆ ಕೈಗೊಂಡ ಮೊದಲ ಭಾರತೀಯ ಮೂಲದ ಗಗನ ಯಾತ್ರಿ. 2003ರಲ್ಲಿ ನಡೆದ ಕೊಲಂಬಿಯಾ ಸ್ಪೇಸ್ ಶೆಟಲ್ ಅಪಘಾತದಲ್ಲಿ ಕಲ್ಪನಾ ಚಾವ್ಲಾ ಸೇರಿ ಒಟ್ಟು ಏಳು ಗಗನಯಾತ್ರಿಗಳು ಮೃತಪಟ್ಟಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.