ವಿದೇಶ

ಎಮ್ಮೆಯ ಸಂದರ್ಶನ ನಡೆಸಿದ ಪಾಕಿಸ್ತಾನ ವರದಿಗಾರ

ಪಾಕಿಸ್ತಾನದಲ್ಲಿ ಮಾಧ್ಯಮ ವರದಿಗಾರನೊಬ್ಬ ಗೋರಿಯೊಳಗೆ ಮಲಗಿ ಸಂದರ್ಶನ ನಡೆಸಿದ್ದು ಆಯ್ತು, ಇದೀಗ ಮತ್ತೋರ್ವ ವರದಿಗಾರ ಎಮ್ಮೆಗಳನ್ನು ಸಂದರ್ಶನ ನಡೆಸಿ...

ಎಮ್ಮೆಯ ಸಂದರ್ಶನ ನಡೆಸಿದ ಪಾಕಿಸ್ತಾನ ವರದಿಗಾರ
ಸಂದರ್ಶನ
Published On :

ಪಾಕಿಸ್ತಾನದಲ್ಲಿ ಮಾಧ್ಯಮ ವರದಿಗಾರನೊಬ್ಬ ಗೋರಿಯೊಳಗೆ ಮಲಗಿ ಸಂದರ್ಶನ ನಡೆಸಿದ್ದು ಆಯ್ತು, ಇದೀಗ ಮತ್ತೋರ್ವ ವರದಿಗಾರ ಎಮ್ಮೆಗಳನ್ನು ಸಂದರ್ಶನ ನಡೆಸಿ ಸುದ್ದಿಯಾಗಿದ್ದಾನೆ. ಎಮ್ಮೆಗಳ ಸಂದರ್ಶನ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಸ್ತೆ ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆಯಲು ಸೇತುವೆ ನಿರ್ಮಿಸಿದ್ದಾರೆ. ಆದರೆ ಈ ಸೇತುವೆಯನ್ನು ಮನುಷ್ಯರಿಗಿಂತ ಜಾಸ್ತಿ ಎಮ್ಮೆ ಹಸುಗಳು ಬಳಕೆ ಮಾಡುತ್ತಿರುವುದರಿಂದ ಮನುಜರನ್ನು ಛೇಡಿಸಲು ವರದಿಗಾರ ಎಮ್ಮೆ ಸಂದರ್ಶನಕ್ಕೆ ಮುಂದಾಗಿದ್ದು.

ಜಿಯೋ ನ್ಯೂಸ್ ನ ವರದಿಗಾರ ಅಮೀನ್ ಹಫೀಜ್ ಎಮ್ಮೆ ಮುಂದೆ ನಿಂತು ಸೇತುವೆ ಹತ್ತಲು ಇಳಿಯಲು ಕಲಿತಿದ್ದು ಹೇಗೆ? ಎಂಬ ಪ್ರಶ್ನೆಯನ್ನು ನೇರವಾಗಿ ಕೇಳಿದ್ದಾನೆ. ಈ ಮೂಲಕ ರಸ್ತೆ ದಾಟಲು ಸೇತುವೆ ಬಳಸದೆ ರೋಡಿನಲ್ಲಿ ಸರ್ಕಸ್ ಮಾಡುವ ಸಾರ್ವಜನಿಕರಿಗೆ ಛೀಮಾರಿ ಹಾಕಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.