ವಿದೇಶ

ಭಾರತಕ್ಕೆ ಕೊಹಿನೂರ್ ಹಿಂತಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ: ಬ್ರಿಟನ್ ಸಚಿವ

ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ ಎಂದು ಬ್ರಿಟನ್ ಸಚಿವ ಅಲೋಕ ಶರ್ಮಾ ಅವರು ಹೇಳಿದ್ದಾರೆ...

ಭಾರತಕ್ಕೆ ಕೊಹಿನೂರ್ ಹಿಂತಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ: ಬ್ರಿಟನ್ ಸಚಿವ
ಕೊಹಿನೂರ್
Published On :

ನವದೆಹಲಿ: ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ ಎಂದು ಬ್ರಿಟನ್ ಸಚಿವ ಅಲೋಕ ಶರ್ಮಾ ಅವರು ಹೇಳಿದ್ದಾರೆ.

ಏಷ್ಯಾ ಮತ್ತು ಫೆಸಿಫಿಕ್ ಗೆ ಬ್ರಿಟನ್ ನ ನೂತನ ಸಚಿವರಾಗಿರುವ ಅಲೋಕ ಶರ್ಮಾ ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ ಎಂಬುದು ಇಂಗ್ಲೆಂಡ್ ಸರ್ಕಾರದ ಅಭಿಪ್ರಾಯವಾಗಿದೆ ಎಂದು ಇದೀಗ ಹೇಳಿದ್ದಾರೆ.

ಪ್ರಧಾನಿ ಮೋದಿ ಸರ್ಕಾರವು ಕಳೆದ ಏಪ್ರಿಲ್ ನಲ್ಲಿ ಕೊಹಿನೂರ್ ವಜ್ರವನ್ನು ಕಳವು ಮಾಡಲಾಗಿದೆ ಎಂದು ಪರಿಗಣಿಸಲಾಗದು ಏಕೆಂದರೆ ಅದನ್ನು ಸಿಖ್ ದೊರೆ ಮಹಾರಾಜ ರಣ್ ಜಿತ್ ಸಿಂಗ್ ಅವರ ಪುತ್ರ ದುಲೀಪ್ ಸಿಂಗ್ ಅವರು ಬ್ರಿಟಿಷರಿಗೆ ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.

ಕೊಹಿನೂರ್ ವಜ್ರವನ್ನು ಭಾರತ ಮತ್ತು ಇಂಗ್ಲೆಂಡ್ ಎರಡೂ ಸರ್ಕಾರಗಳಿಗೆ ಪರಸ್ಪರ ಸ್ವೀಕಾರಾರ್ಹವಾದ ರೀತಿಯಲ್ಲಿ ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಮಾರ್ಗ ಹುಡುಕಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಹಿಂದೆ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.