ಪಪುವಾ ನ್ಯೂಗಿನಿಯಾದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ
ಪಪುವಾ ನ್ಯೂಗಿನಿಯಾದಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ..

ಸಿಡ್ನಿ: ಪಪುವಾ ನ್ಯೂಗಿನಿಯಾದಲ್ಲಿ ಮಂಗಳವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.
ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾದ ಫೆಸಿಫಿಕ್ ಸಮುದ್ರದ ಸುಮಾರು 6.6 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದ್ದು. ರಿಕ್ಟರ್ ಮಾಪಕದಲ್ಲಿ ಶೇ.6.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷಾ ಕೇಂದ್ರ ತಿಳಿಸಿದೆ. ಅಂತೆಯೇ ಭೂಕಂಪನದಿಂದ ಸುನಾಮಿ ಅಲೆಗಳು ಏಳುವ ಸಂಭವವಿಲ್ಲ ಎಂದೂ ಕೂಡ ಇಲಾಖೆ ಸ್ಪಷ್ಟಪಡಿಸಿದೆ. ಭೂಕಂಪನ ಪ್ರಬಲವಾಗಿದ್ದರೂ ಸಮುದ್ರ ಹೆಚ್ಚು ಆಳದಲ್ಲಿ ಸಂಭವಿಸಿರುವುದರಿಂದ ಹೆಚ್ಚಿನ ಅಪಾಯವಿಲ್ಲ ಎಂದು ಇಲಾಖೆ ಹೇಳಿದೆ.
ಭೂಕಂಪನದಿಂದಾಗಿ ದ್ವೀಪರಾಷ್ಟ್ರದಲ್ಲಿ ಯಾವುದೇ ರೀತಿಯ ಹಾನಿಯಾದ ಕುರಿತು ವರದಿಯಾಗಿಲ್ಲ. ಪ್ರಸ್ತುತ ಭೂಕಂಪನ ಸಂಭವಿಸಿರುವ ಪ್ರದೇಶ ಭೂಕಂಪನ ವಲಯದಲ್ಲಿದ್ದು, ಇಲ್ಲಿ ಭೂಕಂಪನ ಸಾಮಾನ್ಯ. ಆದರೆ ಪ್ರಸ್ತುತ ಕಂಪನ ಪ್ರಬಲವಾಗಿದೆಯಾದರೂ ಸುನಾಮಿ ಅಲೆಗಳನ್ನು ಉಂಟುಮಾಡುವಷ್ಟು ಪ್ರಬಲವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


