ವಿದೇಶ

ಅಮೆರಿಕದಲ್ಲಿ ಹಿಂದು ದೇವಾಲಯಕ್ಕೆ ಮುಸ್ಲಿಂ ಪೊಲೀಸ್ ಭದ್ರತೆ

ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿರುವ ಹಿಂದು ದೇವಸ್ಥಾನದ ಭದ್ರತಾ ಅಧಿಕಾರಿಯಾಗಿ ಭಾರತದ ಮುಂಬೈ ಮೂಲದ ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್...

ಅಮೆರಿಕದಲ್ಲಿ ಹಿಂದು ದೇವಾಲಯಕ್ಕೆ ಮುಸ್ಲಿಂ ಪೊಲೀಸ್ ಭದ್ರತೆ
ಹಿಂದೂ ದೇವಾಲಯ(ಸಂಗ್ರಹ ಚಿತ್ರ)
Published On :
ವಾಷಿಂಗ್ಟನ್: ಅಮೆರಿಕದ ಇಂಡಿಯಾನಾಪೊಲಿಸ್ ನಗರದಲ್ಲಿರುವ ಹಿಂದು ದೇವಸ್ಥಾನದ ಭದ್ರತಾ ಅಧಿಕಾರಿಯಾಗಿ ಭಾರತದ ಮುಂಬೈ ಮೂಲದ ಪೊಲೀಸ್ ಅಧಿಕಾರಿ ಲೆಫ್ಟಿನೆಂಟ್ ಜಾವೇದ್ ಖಾನ್ ರನ್ನು ಅಮೆರಿಕ ನೇಮಕ ಮಾಡಿದೆ. 
ಮುಂಬರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪೂರ್ವಭಾವಿಯಾಗಿ ಜನಾಂಗೀಯ ಘರ್ಷಣೆ ನಡೆಯದಿರಲಿ ಎಂದು ಭದ್ರತೆ ಏರ್ಪಡಿಸಲಾಗಿದೆ. 2001ರಲ್ಲಿ ಇಂಡಿಯಾನಕ್ಕೆ ಬಂದು ನೆಲೆಯೂರಿರುವ ಜಾವೇದ್ ಖಾನ್ ಕರಾಟೆ ಬ್ಲಾಕ್ ಬೆಲ್ಟ್ ಮತ್ತು ಟೆಕ್ವಾಂಡೋ ಸಮರ ಕಲೆ ಜತೆಗೆ ಕಿಕ್ ಬಾಕ್ಸಿಂಗ್ ಕಲಾ ಪ್ರವೀಣರಾಗಿದ್ದಾರೆ. 
ಜಾವೀದ್ ಖಾನ್ ಹಿಂದೂ ಸಂಸ್ಕೃತಿ ಬಗ್ಗೆ ಅಪಾರ ಗೌರವ ಹೊಂದಿದ್ದು ತಾನೊಬ್ಬ ಭಾರತೀಯನಾಗಿರುವುದರಿಂದ ಹಿಂದುತ್ವವು ನನ್ನ ರಕ್ತದಲ್ಲಿದೆ. ಈ ಹಿಂದೆ ತನ್ನ ಮಗಳ ವಿವಾಹವನ್ನು ಇದೇ ಮಂದಿರದಲ್ಲಿ ನೆರವೇರಿಸಿದ್ದರು. ಆಗಿನಿಂದ ಈ ದೇವಸ್ಥಾನ ಮತ್ತು ಹಿಂದೂ ಸಂಸ್ಕೃತಿ ಕುರಿತು ಹೆಚ್ಚು ಒಲವು ವ್ಯಕ್ತವಾಯಿತು ಎಂದು ಹೇಳಿದ್ದಾರೆ. 
ಈ ದೇವಾಲಯಕ್ಕೆ ದಿನಂಪ್ರತಿ 400ಕ್ಕೂ ಹೆಚ್ಚು ಭಕ್ತಾಧಿಗಳು ಭೇಟಿ ನೀಡುತ್ತಾರೆ, ವಾರಾಂತ್ಯದಲ್ಲಿ ದೇವರ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ ಎಂದು ದೇವಸ್ಥಾನ ಕಮಿಟಿ ಮುಖ್ಯಸ್ಥರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.