ಜರ್ಮನ್ ರೈಲು ದಾಳಿಯ ಹೊಣೆ ಹೊತ್ತ ಐಎಸ್ಐಎಸ್
ಐಎಸ್ಐಎಸ್ ಉಗ್ರ ಸಂಘಟನೆ ಜರ್ಮನ್ ರೈಲು ದಾಳಿಯ ಹೊಣೆ ಹೊತ್ತುಕೊಂಡಿದೆ.

Published On :
ಬರ್ಲಿನ್: ಐಎಸ್ಐಎಸ್ ಉಗ್ರ ಸಂಘಟನೆ ಜರ್ಮನ್ ರೈಲು ದಾಳಿಯ ಹೊಣೆ ಹೊತ್ತುಕೊಂಡಿದೆ.
ದಕ್ಷಿಣ ಜರ್ಮನಿಯ ವುರೆಜ್ ಬರ್ಗ್ ನಗರದ ಬಳಿ ಯುವಕನೊಬ್ಬ ರೈಲಿನೊಳಗೆ ಪ್ರಯಾಣಿಕರನ್ನು ಕೊಡಲಿ ಮತ್ತು ಚೂರಿಯಿಂದ ದಾಳಿ ನಡೆಸಿ ಐವರನ್ನು ಗಾಯಗೊಳಿಸಿದ್ದ. ಇದೀಗ ಕೃತ್ಯದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿದೆ.
17 ವರ್ಷದ ಆಫ್ಘಾನಿಸ್ತಾನದ ನಿರಾಶ್ರಿತ ಯುವಕನೊಬ್ಬ ರೈಲಿನೊಳಗೆ ಕೊಡಲಿ ಮತ್ತು ಚಾಕುವಿನಿಂದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಕನಿಷ್ಠ ಐವರನ್ನು ಗಾಯಗೊಳಿಸಿದ ಘಟನೆ ನಡೆದಿತ್ತು.
ಸೋಮವಾರ ರಾತ್ರಿ 9.15 (ಸ್ಥಳೀಯ ಕಾಲಮಾನ) ರ ಸುಮಾರಿಗೆ ಬವೇರಿಯಾ ರಾಜ್ಯದ ತ್ರಿಚ್ಲಿಂಗೆನ್ ಮತ್ತು ವುರೆಜ್ಬರ್ಗ್ ನಗರದ ನಡುವೆ ರೈಲು ಸಂಚರಿಸುವಾಗ ಈ ಘಟನೆ ಘಟಿಸಿತ್ತು. ರೈಲು ವುರೆಜ್ಬರ್ಗ್ ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ಯುವಕ ‘ಅಲ್ಲಾಹು ಅಕ್ಬರ್’ ಎಂದು ಘೊಷಣೆ ಕೂಗಿ ಪ್ರಯಾಣಿಕರ ಮೇಲೆ ಹಲ್ಲಿ ನಡೆಸಿದ. ಇದೊಂದು ಸಂಭಾವ್ಯ ಐಸಿಸ್ ದಾಳಿ ಇರಬಹುದು ಎಂದು ಶಂಕಿಸಲಾಗಿತ್ತು. ದಾಳಿಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನ್ನು ಗುಂಡಿಕ್ಕಿ ಕೊಂದಿದ್ದರು. ಯುವಕ ಒಚ್ಸೆನ್ಫುರ್ಟ್ನ ಸಮೀಪ ವಾಸಿಸುತ್ತಿದ್ದ ಎಂದು ಬವೇರಿಯಾ ರಾಜ್ಯದ ಆಂತರಿಕ ಸಚಿವ ಜೋಚಿಮ್ ಹೆರ್ರಮನ್ ತಿಳಿಸಿದ್ದಾರೆ.
ಇತ್ತೀಚಿಗೆ ಯುರೋಪ್ ರಾಷ್ಟ್ರಗಳಲ್ಲಿ ಇಸ್ಲಾಮಿಕ್ ಭಯೋತ್ಪಾದಕರ ದಾಳಿಗಳ ಸಂಖ್ಯೆಹೆಚ್ಚುತ್ತಿದೆ. ಕಳೆದ ವಾರ ಫ್ರಾನ್ಸ್ನಲ್ಲಿ ಉಗ್ರನೊಬ್ಬ ಜನರ ಮೇಲೆ ಟ್ರಕ್ ಹರಿಸಿ 84 ಜನರನ್ನು ಹತ್ಯೆ ಮಾಡಿದ ಘಟನೆ ಮರೆಯಾಗುವ ಮುನ್ನ ಜರ್ಮನಿಯಲ್ಲಿ ಮತ್ತೊಂದು ಘಟನೆ ಘಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


