ವಿದೇಶ

ಚೀನಾದಲ್ಲಿ ಯುವತಿಯನ್ನು ರಕ್ಷಿಸಲು ಹೋಗಿ ಐವರು ನೀರುಪಾಲು

ಕುಡಿದ ಮತ್ತಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಯುವತಿಯನ್ನು ರಕ್ಷಿಸಲು ಹೋಗಿ ಯುವತಿ ಸೇರಿ ಐವರು ಜಲ ಸಮಾಧಿಯಾಗಿರುವ ಘಟನೆ...

ಚೀನಾದಲ್ಲಿ ಯುವತಿಯನ್ನು ರಕ್ಷಿಸಲು ಹೋಗಿ ಐವರು ನೀರುಪಾಲು
ಆತ್ಮಹತ್ಯೆ
Published On :
ಬೀಜೀಂಗ್: ಕುಡಿದ ಮತ್ತಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಯುವತಿಯನ್ನು ರಕ್ಷಿಸಲು ಹೋಗಿ ಯುವತಿ ಸೇರಿ ಐವರು ಜಲ ಸಮಾಧಿಯಾಗಿರುವ ಘಟನೆ ವಾಯುವ್ಯ ಚೀನಾದಲ್ಲಿ ನಡೆದಿದೆ. 
ನದಿಯ ದಡದಲ್ಲಿ 19 ವರ್ಷದ ಯುವತಿ ತನ್ನ ನಾಲ್ವರು ಸಹೋದ್ಯೋಗಿಗಳ ಜತೆ ಸೇರಿ ಗುಂಡಿನ ಪಾರ್ಟಿ ಮಾಡಿದ್ದು, ಬಳಿಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸಹೋದ್ಯೋಗಿಗಳು ಆಕೆಯನ್ನು ರಕ್ಷಿಸಿದ್ದಾರೆ. 
ಯುವತಿಯನ್ನು ರಕ್ಷಿಸಿದ ಸಹೋದ್ಯೋಗಿಗಳು ಆಕೆಯನ್ನು ದಡಕ್ಕೆ ತಂದು ಬಿಟ್ಟಿದ್ದಾರೆ. ಇದಾದ ಬಳಿಕ ಯುವತಿ ಮತ್ತೆ ನದಿಗೆ ಹಾರಿದ್ದಾಳೆ. ಈ ಬಾರಿ ವಿಧಿ ತನ್ನ ಕ್ರೂರ ದೃಷ್ಠಿ ಬೀರಿದ್ದು, ಯುವತಿ ಜತೆ ಸಹೋದ್ಯೋಗಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.