ವಿದೇಶ

ನೇಪಾಳದಲ್ಲಿ ಅಲ್ಪಮತದ ಸರ್ಕಾರ: ನೆರೆ ರಾಷ್ಟ್ರದ ರಾಜಕೀಯದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವ ಚೀನಾ

ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ಪ್ರಧಾನಿಯಾಗಿ ಮುಂದುವರೆಸಬೇಕೆಂಬ ಅಭಿಪ್ರಾಯ ಹೊಂದಿರುವ ಚೀನಾ ಈಗ ಕಿಂಗ್ ಮೇಕರ್ ಪಾತ್ರ ವಹಿಸುತ್ತಿದೆ.

ನೇಪಾಳದಲ್ಲಿ ಅಲ್ಪಮತದ ಸರ್ಕಾರ: ನೆರೆ ರಾಷ್ಟ್ರದ ರಾಜಕೀಯದಲ್ಲಿ ಕಿಂಗ್ ಮೇಕರ್ ಪಾತ್ರ ವಹಿಸುತ್ತಿರುವ ಚೀನಾ
ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್
Published On :

ಕಠ್ಮಂಡು: ನೆರೆ ರಾಷ್ಟ್ರ ನೇಪಾಳದಲ್ಲಿ ಕಮ್ಯುನಿಷ್ಟ್ ಪಕ್ಷ ಬೆಂಬಲ ವಾಪಸ್ ಪಡೆದ ಪರಿಣಾಮ, ಅಲ್ಲಿನ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನು ಪ್ರಧಾನಿಯಾಗಿ ಮುಂದುವರೆಸಬೇಕೆಂಬ ಅಭಿಪ್ರಾಯ ಹೊಂದಿರುವ ಚೀನಾ ಈಗ ಕಿಂಗ್ ಮೇಕರ್ ಪಾತ್ರ ವಹಿಸುತ್ತಿದೆ.

ಚೀನಾ ಪ್ರತಿನಿಧಿಗಳ ತಂಡವೊಂದು ಕಠ್ಮಂಡುವಿನಲ್ಲಿ ಬಿಡು ಬಿಟ್ಟಿದ್ದು ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಪರವಾಗಿ ಒಮ್ಮತ ಮೂಡಿಸಲು ಯತ್ನಿಸುವ ಕೆಲಸದಲ್ಲಿ ನಿರತವಾಗಿದೆ. ಅಕ್ಟೊಬರ್ ತಿಂಗಳಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇಪಾಳಕ್ಕೆ ಭೇಟಿ ನೀಡಲಿದ್ದು ಕನಿಷ್ಠ ಅಲ್ಲಿಯವಗೆ ಆದರೂ ಕೆಪಿ ಶರ್ಮಾ ಓಲಿ ಪ್ರಧಾನಿಯಾಗಿ ಮುಂದುವರೆಯಲು ಅನುಕೂಲಕರ ರಾಜಕೀಯ ವಾತಾವರಣ ನಿರ್ಮಿಸಲು ಚೀನಾ ಯತ್ನಿಸುತ್ತಿದೆ.
ಕೆಪಿ ಶರ್ಮಾ ಓಲಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೇಪಾಳ- ಚೀನಾದ ದ್ವಿಪಕ್ಷೀಯ ಸಂಬಂಧ ಅಭಿವೃದ್ಧಿಯಾಗಿದ್ದು ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚೀನಾ ಕೆಪಿ ಶರ್ಮಾ ಓಲಿ ಬೆಂಬಲಕ್ಕೆ ನಿಂತಿದ್ದು, ಪ್ರಧಾನಿಯನ್ನಾಗಿ ಮುಂದುವರೆಸಲು ಕಸರತ್ತು ನಡೆಸುತ್ತಿದೆ. ಚೀನಾದ ಈ ನಡೆ ಮುಂದಿನ ದಿನಗಳಲ್ಲಿ ನೇಪಾಳ- ಭಾರತದ ಸಂಬಂಧದ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.