ವಿದೇಶ

ಆಫ್ರಿಕಾ ಪ್ರವಾಸ ನನಗೆ ತೀರ್ಥ ಯಾತ್ರೆ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಆಫ್ರಿಕಾ ಪ್ರವಾಸ ನನಗೆ ತೀರ್ಥ ಯಾತ್ರೆ ಇದ್ದಂತೆ ಎಂದು ಹೇಳಿದ್ದಾರೆ.

ಆಫ್ರಿಕಾ ಪ್ರವಾಸ ನನಗೆ ತೀರ್ಥ ಯಾತ್ರೆ ಇದ್ದಂತೆ: ಪ್ರಧಾನಿ ನರೇಂದ್ರ ಮೋದಿ
ದಕ್ಷಿಣ ಆಫ್ರಿಕಾದಲ್ಲಿ ನರೇಂದ್ರ ಮೋದಿ ಸಹ ಐತಿಹಾಸಿಕ ರೈಲು ಪ್ರಯಾಣ
Published On :

ಪ್ರಿಟೋರಿಯ: ದಕ್ಷಿಣ ಆಫ್ರಿಕಾದ ಭೇಟಿಯ ಅಂತಿಮ ದಿನಗಳಲ್ಲಿ ಮಹಾತ್ಮಾ ಗಾಂಧಿ ರೈಲು ಸಂಚಾರ ಕೈಗೊಂಡಿದ್ದ ಮಾದರಿಯಲ್ಲೇ, ದಕ್ಷಿಣ ಆಫ್ರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸಹ ಐತಿಹಾಸಿಕ ರೈಲು ಪ್ರಯಾಣ ನಡೆಸಿದ್ದಾರೆ.

ಮಾನವನೊಬ್ಬನ ಜೀವಿತ ಮುಕ್ತಾಯಗೊಂಡು ಮಹಾತ್ಮನೊಬ್ಬನ ಜೀವನ ಪ್ರಾರಂಭವಾದ ಭೂಮಿ ದಕ್ಷಿಣ ಆಫ್ರಿಕಾ ಆಗಿದ್ದು, ಆಫ್ರಿಕಾ ಪ್ರವಾಸ ನನಗೆ ತೀರ್ಥಯಾತ್ರೆ ಇದ್ದಂತೆ ಎಂದು ಮೋದಿ ಹೇಳಿದ್ದಾರೆ.

ದಕ್ಷಿಣ ಅಪಹರಿಕಾದಲ್ಲಿ ಭಾರತದ ಇತಿಹಾಸ ಹಾಗೂ ಮಹಾತ್ಮಾ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದು ಪ್ರಧಾನಿ ಮೋದಿ ಪತ್ರಕರ್ತರಿಗೆ ಹೇಳಿದ್ದು ಪೀಟರ್ಮೆರಿಟ್ಜ್ಬರ್ ನ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮಾ ಗಾಂಧಿ ಅವರ ಜೀವನಕ್ಕೆ ಸಂಬಂಧಿಸಿದ ಪ್ರದರ್ಶನಕ್ಕೆ ಮೋದಿ ಚಾಲನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.