ವಿದೇಶ

ಚೀನಾಕ್ಕೆ ಅಪ್ಪಳಿಸಿದ ನೆಪರ್ತಾಕ್ ಚಂಡಮಾರುತ: 341 ರೈಲುಗಳ ಸಂಚಾರ ರದ್ದು

ಚೀನಾದಲ್ಲಿ ಭಾರೀ ಪ್ರಮಾಣದ ನೆಪರ್ತಾಕ್ ಚಂಡಮಾರುತ ಅಪ್ಪಳಿಸಿದ್ದರಿಂದ ಆಗ್ನೇಯ ಫುಜಿಯಾನ್ ಪ್ರಾಂತ್ಯದಲ್ಲಿ 341 ರೈಲುಗಳ ...

ಚೀನಾಕ್ಕೆ ಅಪ್ಪಳಿಸಿದ ನೆಪರ್ತಾಕ್ ಚಂಡಮಾರುತ: 341 ರೈಲುಗಳ ಸಂಚಾರ ರದ್ದು
ತೈವಾನ್ ನ ಪೂರ್ವ ಪ್ರಾಂತ್ಯದಲ್ಲಿ ಕಂಡುಬಂದ ನೆಪರ್ತಾಕ್ ಚಂಡಮಾರುತದ ದೃಶ್ಯ
Published On :
ಬೀಜಿಂಗ್: ಚೀನಾದಲ್ಲಿ ಭಾರೀ ಪ್ರಮಾಣದ ನೆಪರ್ತಾಕ್ ಚಂಡಮಾರುತ ಅಪ್ಪಳಿಸಿದ್ದರಿಂದ ಆಗ್ನೇಯ ಫುಜಿಯಾನ್ ಪ್ರಾಂತ್ಯದಲ್ಲಿ 341 ರೈಲುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಧಿಕಾರಿಗಳು ಬರಗಾಲ ಪರಿಹಾರ ತಯಾರಿಗೆ ಮುಂಜಾನೆಯಿಂದಲೇ ಮುನ್ನೆಚ್ಚರಿಕೆ ಘೋಷಿಸಿದ್ದಾರೆ.
ಚಂಡಮಾರುತದ ನಂತರ ಕಳೆದ ಕೆಲ ವಾರಗಳಿಂದ ಚೀನಾ ದೇಶದ ಅನೇಕ ಪ್ರಾಂತ್ಯಗಳಲ್ಲಿ ಸುರಿದ ಭಾರೀ ಮಳೆ ಹಾಗೂ ನೆರೆ ಪ್ರವಾಹದಿಂದ ಇದುವರೆಗೆ ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ ಮತ್ತು 28 ಮಂದಿ ಕಣ್ಮರೆಯಾಗಿದ್ದಾರೆ. ಹುಬೈ ಪ್ರಾಂತ್ಯ ಚಂಡಮಾರುತಕ್ಕೆ ಅತ್ಯಂತ ತೀವ್ರವಾಗಿ ಹಾನಿಯಾದ ಪ್ರದೇಶವಾಗಿದ್ದು 69 ಮಂದಿ ಸಾವನ್ನಪ್ಪಿದ್ದಾರೆ ಮತ್ತು 16 ಮಂದಿ ಕಾಣೆಯಾಗಿದ್ದಾರೆ ಎಂದು ಕ್ಸಿನ್ಯುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ನೆಪರ್ತಾಕ್ ಚಂಡಮಾರುತ ನಾಳೆ ಬೆಳಗ್ಗೆ ಫುಜಿಯಾನ್ ಪ್ರಾಂತ್ಯಕ್ಕೆ ಕಾಲಿಡುವ ನಿರೀಕ್ಷೆಯಿದ್ದು, ಅಲ್ಲಿ ಮತ್ತು ಸುತ್ತಮುತ್ತಲ ಪ್ರಾಂತ್ಯಗಳಲ್ಲಿ ಭಾರೀ ಚಂಡಮಾರುತ ಮತ್ತು ಮಳೆ ಸುರಿಯುವ ನಿರೀಕ್ಷೆಯಿದೆ.
ಇಂದಿನಿಂದ ಬರುವ ಸೋಮವಾರದವರೆಗೆ 300 ಮಿಲಿ ಮೀಟರ್ ನಷ್ಟು ಮಳೆ ಸುರಿಯುವ ಸಾಧ್ಯತೆಯಿದೆ. ಫುಜಿಯಾನ್-ತೈವಾನ್ ಪ್ರಾಂತ್ಯಗಳ ಮಧ್ಯೆ ವಾಹನ ಸಂಚಾರವನ್ನು ನಿನ್ನೆಯಿಂದ ಸ್ಥಗಿತಗೊಳಿಸಲಾಗಿದೆ. ಫುಜಿಯಾನ್, ಗೌಂಗ್ ಡಾಂಗ್ ಮತ್ತು ಝೆಜಿಯಾಂಗ್  ತೀರಗಳಿಂದ ಮೀನುಗಾರಿಗೆ ನಡೆಸುತ್ತಿದ್ದ ದೋಣಿಗಳನ್ನು ಬಂದರಿಗೆ ವಾಪಸ್ಸು ಕರೆಸಿಕೊಳ್ಳಲಾಗಿದೆ.
ನೆಪರ್ತಕ್ ಚಂಡಮಾರುತದಿಂದ ಅನೇಕ ಪ್ರದೇಶಗಳು ಜಲಾವೃತವಾಗಿದ್ದು, ಅನೇಕ ನದಿ, ಸರೋವರಗಳು ಎಚ್ಚರಿಕೆ ಮಟ್ಟ ಮೀರಿ ಹರಿಯುತ್ತಿದೆ.ನೆರೆ ಮತ್ತು ಭೂಕುಸಿತದಿಂದಾಗಿ ಸುಮಾರು 1.84 ದಶಲಕ್ಷ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಇದುವರೆಗೆ ಸುಮಾರು 56 ಸಾವಿರ ಮನೆಗಳು ನೆಲಸಮವಾಗಿದ್ದು, 5 ಲಕ್ಷದ 60 ಸಾವಿರದ 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೀಡಾಗಿವೆ. 
ಚಂಡಮಾರುತದಿಂದಾಗಿ 8.6 ಶತಕೋಟಿ ಡಾಲರ್ ಆರ್ಥಿಕ ನಷ್ಟವಾಗಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.