ಭಾರತದ ಆರ್ಥಿಕಾಭಿವೃದ್ಧಿ ದರ ಶೇ.7.5 ಅತಿಶಯದ್ದು: ಅಮೆರಿಕ
ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7.5ರಷ್ಟು ಎಂದರೆ ಅದು ಅತಿಶಯವಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಆರ್ಥಿಕ ಸುಧಾರಣೆಗೆ...

Published On :
ವಾಷಿಂಗ್ಟನ್: ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ.7.5ರಷ್ಟು ಎಂದರೆ ಅದು ಅತಿಶಯವಾಗುತ್ತದೆ ಎಂದು ಅಮೆರಿಕ ಹೇಳಿದೆ. ಅಲ್ಲದೆ ಆರ್ಥಿಕ ಸುಧಾರಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಾತು ಮತ್ತು ಕೃತಿಯ ನಡುವೆ ಅಂತರವಿದೆ ಎಂದಿದೆ.
ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸುವಲ್ಲಿ ಮೋದಿ ಸರ್ಕಾರ ತುಂಬಾ ನಿಧಾನವಾಗಿದೆ. ಆದರೆ ನೇರ ವಿದೇಶಿ ಹೂಡಿಕೆ ಮತ್ತು ತ್ವರಿತ ಆಡಳಿತಾತ್ಮಕ ನಿರ್ಧಾರಗಳಲ್ಲಿ ಮೋದಿ ಸರ್ಕಾರ ತಂದಿರುವ ಸುಧಾರಣೆಗಳು ಪ್ರಶಂಸನೀಯವಾಗಿವೆ ಎಂದು ಅಮೆರಿಕದ ವಿದೇಶಾಂಗ ಸಚಿವಾಲಯದ ವರದಿ ತಿಳಿಸಿದೆ.
ನರೇಂದ್ರ ಮೋದಿ ಸರ್ಕಾರ ತರಲು ಬಯಸಿರುವ ಹಲವಾರು ಬಗೆಯ ಆರ್ಥಿಕ ಸುಧಾರಣೆಗಳು ಸಂಸತ್ತಿನಲ್ಲಿ ಅನುಮೋದನೆಗೊಳ್ಳಬೇಕಿವೆ ಎಂದು ಅಮೆರಿಕ ವಿದೇಶಾಂಗ ಸಚಿವಾಲಯವು ಸಿದ್ಧಪಡಿಸಿರುವ "2016ರ ಹೂಡಿಕೆ ಸನ್ನಿವೇಶ' ಶೀರ್ಷಿಕೆಯ ವರದಿ ಹೇಳಿದೆ.
ಈ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಅನೇಕ ಹೂಡಿಕೆದಾರರು, ಈಗ ಮೋದಿ ಸರ್ಕಾರಕ್ಕೆ ಕ್ರಾಂತಿಕಾರಕ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಇರುವ ಸಂಸದೀಯ ಅಡಚಣೆಗಳಿಂದ ಭ್ರಮನಿರಸನಗೊಂಡು ಹಿಂದೆ ಸರಿಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದ ಜಿಡಿಪಿ ಅಂಕಿ ಅಂಶಗಳ ನಿಜ ಬಣ್ಣ ಬಯಲಾದರೆ ಭಾರೀ ರಾಜಕೀಯ ಗೊಂದಲ, ಕ್ಷೋಭೆ ಉಂಟಾದೀತು ಎಂದು ಈಚೆಗೆ ಬಿಜೆಪಿಯ ನೂತನ ರಾಜ್ಯಸಭಾ ಸದಸ್ಯ, ವಿವಾದಾತ್ಮಕ ನಾಯಕ, ಸುಬ್ರಹ್ಮಣ್ಯನ್ ಸ್ವಾಮಿ ಅವರು ಹೇಳಿದ್ದ ಮಾತು ಇದೀಗ ಅಮೆರಿಕದ ಈ ಹೇಳಿಕೆಯಿಂದಾಗಿ ಪುಷ್ಟಿ ಪಡೆದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


