ವಿದೇಶ

ಝುಕರ್ ಬರ್ಗ್ ಒಂದೇ ಬಗೆಯ ಶರ್ಟ್ ನ ಹಿಂದಿನ ರಹಸ್ಯ

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಯಾವಾಗಲೂ ಬೂದು ಬಣ್ಣದ ಟಿ-ಶರ್ಟ್ ಅನ್ನೇ ಏಕೆ ಧರಿಸುತ್ತಾರೆ ಎನ್ನುವುದು ವಿಶ್ವಾದ್ಯಂತ ಅನೇಕರಲ್ಲಿ ಮೂಡಿರುವ ಪ್ರಶ್ನೆ..

ಝುಕರ್ ಬರ್ಗ್ ಒಂದೇ ಬಗೆಯ ಶರ್ಟ್ ನ ಹಿಂದಿನ ರಹಸ್ಯ
ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ (ಸಂಗ್ರಹ ಚಿತ್ರ)
Published On :

ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್  ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು  ಯಾವಾಗಲೂ ಬೂದು ಬಣ್ಣದ ಟಿ-ಶರ್ಟ್ ಅನ್ನೇ ಏಕೆ ಧರಿಸುತ್ತಾರೆ ಎನ್ನುವುದು ವಿಶ್ವಾದ್ಯಂತ ಅನೇಕರಲ್ಲಿ ಮೂಡಿರುವ ಪ್ರಶ್ನೆ.

ಇದಕ್ಕೆ ಸ್ವತಃ ಝುಕರ್ ಬರ್ಗ್ ಅವರೇ ಉತ್ತರ ನೀಡಿದ್ದು, ತನ್ನಲ್ಲಿ ಒಂದೇ ಮಾದರಿಯ ಹಲವು ಶರ್ಟ್ ಗಳಿವೆ ಎಂದೂ ಹೇಳಿದ್ದರು.  ಆದರೆ ಇತ್ತೀಚೆಗೆ ಇದನ್ನು ಸಾಬೀತುಪಡಿಸುವಂತೆ ಮಾರ್ಕ್ ಅವರು ತಮ್ಮ ವಾರ್ಡ್ ರೋಬ್ ನ ಚಿತ್ರವನ್ನೇ ಅಪ್ ಲೋಡ್  ಮಾಡಿದ್ದಾರೆ. ಅಚ್ಚರಿಯೆಂದರೆ, ಅವರ ಕಪಾಟಿನಲ್ಲಿರುವುದು ಬೂದು ಬಣ್ಣದ ಟಿ-ಶರ್ಟ್ ಮತ್ತು ಹೂಡಿಗಳು ಮಾತ್ರ.

ಪಿತೃತ್ವ ರಜೆ ಮುಗಿಸಿ ಈಗ ತಾನೇ ಕಚೇರಿಗೆ ಹೊರಡುತ್ತಿದ್ದೇನೆ. ಯಾವ ಬಟ್ಟೆ ಧರಿಸಲಿ? ಎಂಬ ಪ್ರಶ್ನೆಯೊಂದಿಗೆ ಅವರು ತಮ್ಮ  ವಾರ್ಡ್ ರೋಬ್ ನ ಚಿತ್ರವನ್ನು ಅಪ್ ಲೋಡ್ ಮಾಡಿದ್ದಾರೆ. ಆದರೆ ಅದರಲ್ಲಿ ಒಂದೇ ರೀತಿಯ ಟಿ-ಶರ್ಟ್‌ಗಳಿದ್ದವು ಎಂಬುದು  ವಿಶೇಷ. ವಿಚಿತ್ರವೆಂದರೆ ಜುಕರ್‌ಬರ್ಗ್ ಫೇಸ್‌ಬುಕ್ ಆರಂಭದ ದಿನದಿಂದಲೂ ಒಂದೇ ರೀತಿಯ ಟಿ-ಶರ್ಟ್ ಧರಿಸುತ್ತಿದ್ದಾರೆ.  ಕೆಲಸಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಹೀಗೆ ಮಾಡುತ್ತೇನೆಂದು ಮಾರ್ಕ್ ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.