ಇರಾನ್ ದಿಗ್ಬಂಧನ ತೆರವು: ತೈಲ ದರ ಇನ್ನಷ್ಟು ಅಗ್ಗ?
ಜುಲೈ 2012ರವರೆಗೂ ಇರಾನ್‍ನಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿತ್ತು...

Published On :
ಜುಲೈ 2012ರವರೆಗೂ ಇರಾನ್‍ನಿಂದ ಅತಿ ಹೆಚ್ಚು ತೈಲ ಖರೀದಿಸುತ್ತಿರುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿತ್ತು. ಐರೋಪ್ಯ ಒಕ್ಕೂಟವು ಇರಾನ್ ಮೇಲೆ ದಿಗ್ಬಂಧನ ವಿಧಿಸಿದ ಸಂದರ್ಭದಲ್ಲಿ ಭಾರತವು ಶೇ.13ರಷ್ಟು ತೈಲಕ್ಕೆ ಇರಾನ್ ಅನ್ನು ಅವಲಂಬಿಸಿತ್ತು.
ಅಮೆರಿಕದ ದಿಗ್ಬಂಧನ ಘೋಷಣೆಯಾದ ಬಳಿಕ ಈ ಪ್ರಮಾಣವು ಶೇ.11ಕ್ಕೆ ಬಂದಿತ್ತು. ಆರಂಭದಲ್ಲಿ ಭಾರತವು ಅಮೆರಿಕದ ದಿಗ್ಬಂಧವನ್ನು ನಿರ್ಲಕ್ಷಿಸಿತ್ತಾದರೂ, ನಂತರ ಒತ್ತಡ ಹಾಗೂ ಬೆದರಿಕೆಗೆ ಮಣಿದು ಇರಾನ್‍ನೊಂದಿಗಿನ ಸಂಬಂಧ ಕಡಿತ ಗೊಳಿಸಿತು. ಅಷ್ಟೇ ಅಲ್ಲ, ಇರಾನ್‍ಗೆ ಕೊಡಲು ಬಾಕಿಯಿದ್ದ ಮೊತ್ತವನ್ನು ಪಾವತಿಸಲೂ ಭಾರತಕ್ಕೆ ಈ ದಿಗ್ಬಂಧ ಅಡ್ಡಿಯಾಗಿತ್ತು. ದಿಗ್ಬಂಧನ ತೆರವಾದ ಕಾರಣ, ಇನ್ನು ಇರಾನ್ ತನಗೆ ಬೇಕಾದಷ್ಟು ಕಚ್ಚಾತೈಲವನ್ನು ವಿಶ್ವಕ್ಕೆ ರಫ್ತು ಮಾಡಬಹುದು.
ತಾನು ದಿನಕ್ಕೆ 5 ಲಕ್ಷ ಬ್ಯಾರೆಲ್‍ನಷ್ಟು ತೈಲ ಮಾರಾಟ ಹೆಚ್ಚಿಸುವುದಾಗಿ ಈಗಾಗಲೇ ಇರಾನ್ ಘೋಷಿಸಿದ್ದು, ಮುಂದಿನ ವರ್ಷದೊಳಗಾಗಿ 2.5 ದಶಲಕ್ಷ ಬ್ಯಾರೆಲ್ ತೈಲ ರಫ್ತಾಗಲಿದೆ. ಇದರಿಂದ ಕಚ್ಚಾ ತೈಲದ ಬೆಲೆ ಇನ್ನಷ್ಟು ಇಳಿಮುಖವಾಗಲಿದೆ. ಅಷ್ಟೇ ಅಲ್ಲದೆ, ಗ್ರಾಹಕರನ್ನು ಸೆಳೆಯುವ ಸಲು ವಾಗಿ ಇರಾನ್ ತೈಲ ದರದಲ್ಲಿ ರಿಯಾಯಿತಿಯನ್ನೂ ಘೋಷಿಸುವ ಸಾಧ್ಯತೆಯಿದೆ.
ಜತೆಗೆ, ಸೌದಿ ಅರೇಬಿಯಾದೊಂದಿಗೆ ಇರಾನ್ ಪೈಪೋಟಿಗೆ ಬೀಳುವ ಕಾರಣ, ಭಾರತದಂತಹ ತೈಲದಾಹಿ ದೇಶಗಳಿಗೆ ಮುಂದಿನ ದಿನಗಳಲ್ಲಿ ಅತ್ಯಂತ ಅಗ್ಗದ ದರದಲ್ಲಿ ತೈಲ ಪ್ರಾಪ್ತಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


