ಒಬಾಮಗೆ ಹನುಮನೇ ಸ್ಫೂರ್ತಿಯಂತೆ!
ಅಮೆರಿಕ ಅಧ್ಯಕ್ಷ ಒಬಾಮ ಅವರು ನಿತ್ಯವೂ ತಮ್ಮ ಜತೆ ಕೆಲವೊಂದು ಪರಿಕರಗಳನ್ನು ಒಯ್ಯುತ್ತಾರೆ...

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಒಬಾಮ ಅವರು ನಿತ್ಯವೂ ತಮ್ಮ ಜತೆ ಕೆಲವೊಂದು ಪರಿಕರಗಳನ್ನು ಒಯ್ಯುತ್ತಾರೆ. ಅದರಲ್ಲಿ, ಆಂಜನೇಯನ ಪುಟ್ಟ ಪ್ರತಿಮೆಯೂ ಒಂದು.
ತಾವು ಖಿನ್ನರಾದಾಗ, ಅಧೀರರಾದಾಗ ಸ್ಫೂರ್ತಿ ಪಡೆಯಲು ಈ ಪ್ರತಿಮೆ ನೋಡುತ್ತಾರೆ. ಈ ಸಂಗತಿಯನ್ನು ಸ್ವತಃ ಬರಾಕ್ ಒಬಾಮಾ ಅವರೇ ಬಹಿರಂಗಪಡಿಸಿದ್ದಾರೆ.
ಒಬಾಮಾ ಅಧ್ಯಕ್ಷ ಅವಧಿಯ ಕೊನೇ ಭಾಷಣದ ಅಂಗವಾಗಿ ಅವರು ಶುಕ್ರವಾರ ಯ್ಯೂಟ್ಯೂಬ್‍ಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಒಬಾಮ, ಸಂಕಷ್ಟದಲ್ಲಿ ತಾವು ಈ ಪರಿಕರಗಳಿಂದ ಸ್ಫೂರ್ತಿ ಪಡೆಯುವುದಾಗಿ ತಿಳಿಸಿದ್ದಾರೆ.
ಅವರು ಈ ವಿಷಯ ಬಹಿರಂಗಪಡಿಸುತ್ತಿದ್ದಂತೆ, ಆ ವಸ್ತುಗಳನ್ನು ಪ್ರದರ್ಶಿಸುವಂತೆ ಸಂದರ್ಶಕರು ಕಾರ್ಯಕ್ರಮದ ನಡುವೆಯೇ ಮನವಿ ಮಾಡಿದರು. ಕೂಡಲೇ ಜೇಬುಗಳಿಗೆ ಕೈ ಹಾಕಿದ ಅವರು, ಹನುಮನ ವಿಗ್ರಹ ಸೇರಿ ಒಂದೊಂದಾಗಿಯೇ ಎಲ್ಲ ಪರಿಕರಗಳನ್ನು ಹೊರತೆಗೆದರು.
ಈ ಒಂದೊಂದು ವಸ್ತುಗಳೂ ನಾನು ಇಲ್ಲಿವರೆಗೆ ಸಾಗಿ ಬಂದ ಹಾದಿಯಲ್ಲಿ ಭೇಟಿಯಾದ ಜನರನ್ನು ನೆನಪಿಸುತ್ತದೆ,'' ಎಂದರು. ಮೊದಲು ಯೇಸು ಕ್ರಿಸ್ತನ ಮಣಿ ಮಾಲೆ ತೆಗೆದು ತೋರಿಸಿದ ಒಬಾಮ , `` ಇದು ವೈಟ್‍ಹೌಸ್‍ಗೆ ಭೇಟಿ ನೀಡಿದ್ದ ಪೋಪ್ ಫ್ರಾನ್ಸಿಸ್ ನೀಡಿದ್ದು,'' ಎಂದರು.
ನಂತರ ಪುಟ್ಟ ಬುದ್ಧನ ಮೂರ್ತಿ ತೋರಿಸಿ, ಇದನ್ನು ಓರ್ವ ಸನ್ಯಾಸಿ ನೀಡಿದ್ದಾಗಿ ತಿಳಿಸಿದರು. ಅದಾದ ನಂತರ ಬೆಳ್ಳಿ ಚಿಪ್ ತೋರಿಸಿ ಇದು ಅಯೋವಾದ ಬೈಕರ್ ನೀಡಿದ್ದರು ಎಂದರು. ನಂತರ, ಹನುಮನ ಮೂರ್ತಿಯನ್ನು ಹೊರತೆಗೆದು ತೋರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


