ಈತ 800 ಮಕ್ಕಳ ಅಪ್ಪ!
ಮೂರು ಮಕ್ಕಳ ಅಪ್ಪನಾಗಿರುವ ಈತ ವೀರ್ಯದಾನ ಮಾಡಿದ ಲೆಕ್ಕ ನೋಡಿದರೆ 800 ಮಕ್ಕಳಿಗೆ ತಂದೆಯಾಗಿದ್ದಾನೆ. ಅಂದರೆ ಪ್ರತೀ ವಾರಕ್ಕೆ ಒಂದು ಮಗು!

Published On :
ಬ್ರಿಟನ್: 2012ರಲ್ಲಿ ಬಿಡುಗಡೆಯಾದ ಬಾಲಿವುಡ್ ಸಿನಿಮಾ ವಿಕಿ ಡೋನರ್ ನೆನಪಿರಬಹುದು. ವೀರ್ಯ ದಾನಿಯಾಗಿರುವ ಯುವಕನೊಬ್ಬನ ಕಥೆಯಾಗಿತ್ತು. ಆದರೆ ಅಂಥದ್ದೇ ಒಬ್ಬ ವೀರ್ಯ ದಾನಿ ಬ್ರಿಟನ್‌ನಲ್ಲಿದ್ದಾನೆ. ಈತನ ಹೆಸರು ಸೈಮನ್ ವಾಟ್ಸನ್, ವಯಸ್ಸು 41. ಕಳೆದ 16 ವರುಷಗಳಿಂದ ಈತ ವೀರ್ಯ ದಾನ ಮಾಡುತ್ತಿದ್ದಾನೆ.
ಮೂರು ಮಕ್ಕಳ ಅಪ್ಪನಾಗಿರುವ ಈತ ವೀರ್ಯದಾನ ಮಾಡಿದ ಲೆಕ್ಕ ನೋಡಿದರೆ 800 ಮಕ್ಕಳಿಗೆ ತಂದೆಯಾಗಿದ್ದಾನೆ. ಅಂದರೆ ಪ್ರತೀ ವಾರಕ್ಕೆ ಒಂದು ಮಗು!
ವೀರ್ಯದಾನದ ಬಗ್ಗೆ ಫೇಸ್‌ಬುಕ್ ನಲ್ಲಿ ಈತ ಪೋಸ್ಟ್ ಹಾಕಿದ್ದ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ವೀರ್ಯದಾನಕ್ಕಾಗಿ ಈತ 50 ಪೌಂಡ್ ತೆಗೆದುಕೊಳ್ಳುತ್ತಿದ್ದ.
19 ಮತ್ತು 17ರ ಹರೆಯದ ಇಬ್ಬರು ಗಂಡು ಮಕ್ಕಳು ಮತ್ತು ಎರಡನೇ ಮದುವೆಯಲ್ಲಿ 10 ವರ್ಷದ ಮಗಳು ಸೈಮನ್‌ಗಿದ್ದಾಳೆ. ಹೆಂಡತಿಗೆ ಈ ಎಲ್ಲ ವಿಷಯಗಳೂ ಗೊತ್ತು ಎಂದು ಸೈಮನ್ ಹೇಳಿದ್ದಾರೆ.
2014 ರಲ್ಲಿ 12 ದೇಶದ ಮಹಿಳೆಯರಿಗೆ ನಾನು ವೀರ್ಯದಾನ ಮಾಡಿದ್ದೇನೆ. ಇದು ವಿಶ್ವ ದಾಖಲೆ ಎಂದು ಸೈಮನ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


