ವಿದೇಶ

ಜಪಾನ್'ನಲ್ಲಿ ಪ್ರಬಲ ಭೂಕಂಪ:6.7 ರಷ್ಟು ತೀವ್ರತೆ ದಾಖಲು

ಉತ್ತರ ಜಪಾನ್ನಲ್ಲಿರುವ ಹೊಕ್ಕಾಯ್ಡೊದ ಕರಾವಳಿ ತೀರ ಪ್ರದೇಶದ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ...

ಜಪಾನ್'ನಲ್ಲಿ ಪ್ರಬಲ ಭೂಕಂಪ:6.7 ರಷ್ಟು ತೀವ್ರತೆ ದಾಖಲು
ಜಪಾನ್'ನಲ್ಲಿ ಪ್ರಬಲ ಭೂಕಂಪ:6.7 ರಷ್ಟು ತೀವ್ರತೆ ದಾಖಲು
Published On :

ಟೋಕಿಯೋ: ಉತ್ತರ ಜಪಾನ್ನಲ್ಲಿರುವ ಹೊಕ್ಕಾಯ್ಡೊದ ಕರಾವಳಿ ತೀರ ಪ್ರದೇಶದ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ.

ಹೊಕ್ಕಾಯ್ಡೊನಲ್ಲಿನ ಉರಾಕಾವ ಪ್ರದೇಶದ ಬಳಿ ರಾತ್ರಿ 12.30ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ.

ಹೊಕ್ಕಾಯ್ಡೋ ಕರಾವಳಿ ತೀರ ಪ್ರದೇಶದಲ್ಲಿರುವ ಸಮುದ್ರದ ಕೆಳ 50 ಕಿ.ಮೀನಷ್ಟು ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಕಂಡುಬಂದಿದೆ ಎಂದು ಅಲ್ಲಿನ ತಜ್ಞರು ಮಾಹಿತಿ ನೀಡಿದ್ದಾರೆ. ಭೂಕಂಪದಿಂದಾಗಿ ಸಾವು-ನೋವು ಸಂಭವಿಸಿರುವುದಾಗಿ ಈವರೆಗೂ ಯಾವುದೇ ವರದಿಗಳಾಗಿಲ್ಲ. ಸುನಾಮಿ ಸಂಭವಿಸುವುದಾಗಿ ಯಾವುದೇ ರೀತಿಯ ಎಚ್ಚರಿಕೆಗಳನ್ನು ಅಧಿಕಾರಿಗಳು ನೀಡಿಲ್ಲ.

ಭೂಕಂಪ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ವಿಪತ್ತು ನಿರ್ಹವಣಾ ಅಧಿಕಾರಿ ಹಿರೋಯುಕಿ ಕೆನೈ ಅವರು, ಕಚೇರಿಯಲ್ಲಿ ಊಟ ಮಾಡುತ್ತಿದ್ದ ಸಂದರ್ಭದಲ್ಲಿ ಭೂಕಂಪ ಸಂಭವಿಸುತ್ತಿರುವುದಾಗಿ ಅನುಭವವಾಯಿತು. ಬಹಳ ಆಶ್ಯರ್ಯವಾಯಿತು. ಈಗಾಗಲೇ ಭೂಕಂಪ ಪೀಡಿತ ಪ್ರದೇಶಗಳಿಗೆ ಸಿಬ್ಬಂದಿಗಳನ್ನು ಕಳುಹಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಎಂದು ಹೇಳಿದ್ದಾರೆ.

ಭೂಕಂಪದಿಂದಾಗಿ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಅಲ್ಲಿನ ಅಧಿಕಾರಿಗಳು ಇತ್ತೀಚೆಗಷ್ಟೇ ಉದ್ಘಾಟನೆ ಮಾಡಿ ಬಿಡುಗಡೆ ಮಾಡಿದ್ದ ಬುಲೆಟ್ ರೈಲುಗಳ ಸಂಚಾರ ವ್ಯವಸ್ಥೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.