ಪಠಾಣ್‍ಕೋಟ್ ದಾಳಿ: ಭಾರತ-ಪಾಕ್ ಬಾಂಧವ್ಯಕ್ಕೆ ಸವಾಲು- ಪಾಕ್ ಮಾಧ್ಯಮಗಳು
ಪ್ರಧಾನಿ ಮೋದಿ ಅವರ ಭೇಟಿಯು ಭಾರತ-ಪಾಕ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಾಭಾವ ಮೂಡಿಸಿದ್ದರೂ, ಪಠಾಣ್‍ಕೋಟ್...

Published On :
ಇಸ್ಲಾಮಾಬಾದ್: ಪ್ರಧಾನಿ ಮೋದಿ ಅವರ ಭೇಟಿಯು ಭಾರತ-ಪಾಕ್ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಶಾಭಾವ ಮೂಡಿಸಿದ್ದರೂ, ಪಠಾಣ್‍ಕೋಟ್ ದಾಳಿಯು ಉಭಯ ದೇಶಗಳ ಸಂಬಂಧಕ್ಕೆ ಸವಾಲು ಹಾಕಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅಭಿಪ್ರಾಯಪಟ್ಟಿವೆ.
ಭಾನುವಾರ ಎಕ್ಸ್‍ಪ್ರೆಸ್ ಟ್ರಿಬ್ಯೂನ್, ದ ನ್ಯೂಸ್ ಇಂಟರ್ ನ್ಯಾಷನಲ್, ಡಾನ್ ಸೇರಿದಂತೆ ಪಾಕ್‍ನ ಪ್ರಮುಖ ಪತ್ರಿಕೆಗಳು ಪಠಾಣ್‍ಕೋಟ್ ಉಗ್ರ ದಾಳಿಯ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದವು. ಜತೆಗೆ, ಈ ದಾಳಿಯು ಇನ್ನೇನು ಸರಿಹೋಗುತ್ತಿದ್ದ ಉಭಯ ದೇಶಗಳ ಸಂಬಂಧಕ್ಕೆ ಹುಳಿ ಹಿಂಡಿದೆ ಎಂದು ಎಕ್ಸ್‍ಪ್ರೆಸ್ ಟ್ರಿಬ್ಯೂನ್ ಹೇಳಿದೆ.
ಇನ್ನು ದಾಳಿ ಬೆನ್ನಲ್ಲೇ ಭಾರತದ ಪ್ರತಿಕ್ರಿಯೆ ನೋಡಿದರೆ, ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆ ಅಂದುಕೊಂ ಡಂತೆ ನಡೆಯಲಿದೆ ಎಂಬುದನ್ನು ಸೂಚಿಸಿದೆ ಎಂದು ಡಾನ್ ವರದಿ ಮಾಡಿದೆ. ಉರ್ದು ಪತ್ರಿಕೆಗಳು ಮಾತ್ರ, ತನಿಖೆಗೆ ಮೊದಲೇ ಪಾಕ್ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


