ಪ್ರತಿಭಟನಾ ನಿರತ ನೇಪಾಳದ ಮದೇಶಿ ಮೋರ್ಚಾ ಇಬ್ಭಾಗ
ನೇಪಾಳದಲ್ಲಿ ಜಾರಿಗೆ ಬಂದಿರುವ ಹೊಸ ಸಂವಿಧಾನದಲ್ಲಿ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನೆಪಾಳ ಮದೇಶಿ ಮೋರ್ಚಾ ಇಬ್ಭಾಗವಾಗಿದೆ.

ಕಠ್ಮಂಡು: ನೇಪಾಳದಲ್ಲಿ ಜಾರಿಗೆ ಬಂದಿರುವ ಹೊಸ ಸಂವಿಧಾನದಲ್ಲಿ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನೆಪಾಳ ಮದೇಶಿ ಮೋರ್ಚಾ ಇಬ್ಭಾಗವಾಗಿದೆ.
ಮದೇಶಿ ಮೋರ್ಚಾದಲ್ಲಿ 4 ಪ್ರಾದೇಶಿಕ ಪಕ್ಷಗಳಿದ್ದು, ಈ ಪೈಕಿ ಸದ್ಭಾವನ ಪಕ್ಷ ಟೆರೈ ಪ್ರದೇಶದಲ್ಲಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿದೆ. ಸಂವಿಧಾನದ ತಿದ್ದುಪಡಿಗಾಗಿ ಅಗ್ರಹಿಸಿ ಕಳೆದ ನಾಲ್ಕು ತಿಂಗಳಿಂದ ನೇಪಾಳದ ಟೆರೈ ಪ್ರದೇಶದಲ್ಲಿ ಮೋರ್ಚಾ ನೇತೃತ್ವದ ಪ್ರತಿಭಟನೆ ತೀವ್ರವಾಗಿತ್ತು.
ನೇಪಾಳ- ಭಾರತ ಗಡಿ ಪ್ರದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದಿದ್ದರಿಂದ ನೇಪಾಳಕ್ಕೆ ಪ್ರಮುಖ ಸರಕುಗಳ ಪೂರೈಕೆ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮದೇಶಿ ಮೋರ್ಚಾ ಗಡಿ ಕೇಂದ್ರಿತ ಪ್ರತಿಭಟನೆಯನ್ನು ವಾಪಸ್ ಪಡೆಯಲು ಮುಂದಾಗಿತ್ತು. ಆದರೆ ಪ್ರತಿಭಟನೆಯನ್ನು ವಾಪಸ್ ಪಡೆಯುವುದಕ್ಕೆ ಸದ್ಭಾವನಾ ಪಕ್ಷ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಿದೆ.
ಪ್ರತ್ಯೇಕ ಪ್ರತಿಭಟನೆ ನಡೆಗೆ ಟೀಕೆ ವ್ಯಕ್ತವಾಗಿದ್ದು, ಸದ್ಭಾವನಾ ಪಕ್ಷ ಪ್ರತ್ಯೇಕ ಪ್ರತಿಭಟನೆಗೆ ಕರೆ ನೀಡಬಾರದಿತ್ತು ಎಂದು ಸಂಘೀಯ ಸಮಾಜವಾದಿ ವೇದಿಕೆಯ ಅಧ್ಯಕ್ಷ ಉಪೇಂದ್ರ ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


