ಸೇನಾ ದಾಳಿಗೆ ಹೆದರಿದ ಇಸಿಸ್; ಮಹಿಳೆಯರ ಉಡುಪು ಧರಿಸಿ ಪರಾರಿಗೆ ಯತ್ನ
ರಾಕ್ಷಸರಿಗಿಂತಲೂ ಹೀನವಾಗಿ ವರ್ತಿಸಿ ಇಡೀ ವಿಶ್ವಕ್ಕೆ ತಲೆ ನೋವಾಗಿ ಪರಿಣಮಿಸಿದ್ದ ಇಸಿಸ್ ಉಗ್ರರಿಗೇ ಇದೀಗ ಇರಾಕ್ ಸೇನೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸೇನಾ ದಾಳಿಗೆ ಹೆದರಿರುವ ಇಸಿಸ್ ಉಗ್ರರು...

Published On :
ಬಾಗ್ದಾದ್: ರಾಕ್ಷಸರಿಗಿಂತಲೂ ಹೀನವಾಗಿ ವರ್ತಿಸಿ ಇಡೀ ವಿಶ್ವಕ್ಕೆ ತಲೆ ನೋವಾಗಿ ಪರಿಣಮಿಸಿದ್ದ ಇಸಿಸ್ ಉಗ್ರರಿಗೇ ಇದೀಗ ಇರಾಕ್ ಸೇನೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಸೇನಾ ದಾಳಿಗೆ ಹೆದರಿರುವ ಇಸಿಸ್ ಉಗ್ರರು ಇದೀಗ ದಾಳಿಯಿಂದ ಪರಾರಿಯಾಗಲು ಗಡ್ಡ ಬೋಳಿಸಿ, ಮಹಿಳೆಯರ ಉಡುಪು ಧರಿಸಿ ಪರಾರಿಯಾಗಲು ಯತ್ನ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಸೇನಾ ದಾಳಿಯಿಂದ ಕಂಗಾಲಾಗಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಇರಾನ್ ಸಂಘಟನೆಯ ಉಗ್ರರು ಸೇನಾ ದಾಳಿಯಿಂದ ತಪ್ಪಿಸಿಕೊಳ್ಳಲು ಹಾಗೂ ಸೇನೆ ಸಿಬ್ಬಂದಿಗಳನ್ನು ಮೂರ್ಖರನ್ನಾಗಿ ಮಾಡಲು ತಮ್ಮ ಗಡ್ಡವನ್ನು ಬೋಳಿಸಿ, ಮಹಿಳೆಯರ ಉಡುಪು ಧರಿಸಿ ರಮಡಿ ನಗರದಿಂದ ಪರಾರಿಯಾಗಲು ಯತ್ನಿಸಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೇನಾ ಸಿಬ್ಬಂದಿಗಳ ಕಣ್ಣಿಗೆ ಮಂಕು ಬಳಿಯಲು ಯತ್ನಿಸಿರುವ ಇಸಿಸ್ ಉಗ್ರರು ಮಹಿಳೆಯರ ವೇಷ ಧರಿಸಿ ರಮಡಿಯಿಂದ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಇದರಲ್ಲಿ ಅವರ ಪ್ರಯತ್ನ ವಿಫಲವಾಯಿತು. ನಮ್ಮ ಸೇನೆ ಉಗ್ರರನ್ನು ಕಂಡು ಹಿಡಿದು ಎಲ್ಲಾ ಉಗ್ರರನ್ನು ಬಂಧನಕ್ಕೊಳಪಡಿಸಿದೆ ಎಂದು ಇರಾಕ್ ಭದ್ರತಾ ಕಮಾಂಡರ್ ಹೇಳಿದ್ದಾರೆ.
ರಮಡಿ ನಗರದಲ್ಲಿ ತಲೆಮರೆಸಿಕೊಂಡಿರುವ ಉಗ್ರರು ಇದೀಗ ತಪ್ಪಿಸಿಕೊಳ್ಳಲು ಹಲವು ಯತ್ನಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಮಹಿಳೆಯರ ವೇಷ ಧರಿಸಿರುವುದು ಕೂಡ ಒಂದು ಪ್ರಯತ್ನವಾಗಿದೆ. ಸೇನಾ ಪಡೆಗಳ ಕೈಗೆ ಸಿಕ್ಕಿ ಹಾಕಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ ಮಹಿಳಯರಂತೆ ವೇಷ ಧರಿಸಿದ್ದ 9 ಮಂದಿ ಇಸಿಸ್ ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಿದ್ದಾರೆ.
ರಮಡಿ ನಗರವು ಅನ್ಬರ್ ಪ್ರಾಂತ್ಯದ ರಾಜಧಾನಿಯಾಗಿದ್ದು, ಇಸಿಸ್ ಉಗ್ರರು ನಗರವನ್ನು ತಮ್ಮ ಕೈವಶ ಮಾಡಿಕೊಂಡಿದ್ದರು. ಇದರಂತೆ ಕಳೆದ ವಾರ ಇರಾಕ್ ಸೇನೆ ರಮಡಿ ಮೇಲೆ ದಾಳಿ ಮಾಡಿತ್ತು. ದಾಳಿ ವೇಳೆ ರಮಡಿಯನ್ನು ಸೇನೆ ತನ್ನ ವಶಕ್ಕೆ ಪಡೆದುಕೊಂಡಿತ್ತು. ಹೀಗಾಗಿ ಸೇನಾ ದಾಳಿಗೆ ಹೆದರಿರುವ ಇಸಿಸ್ ತಪ್ಪಿಸಿಕೊಳ್ಳಲು ಇದೀಗ ಮಹಿಳೆಯರ ವೇಷ ಧರಿಸಿ ಸೇನೆಗೆ ಮಂಕುಬೂದಿ ಎರಚುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


