ಲಾಹೋರ್ : ಮೆಟ್ರೋ ರೈಲು ಹಳಿ ನಿರ್ಮಾಣಕ್ಕಾಗಿ ಐತಿಹಾಸಿಕ ಜೈನ ದೇಗುಲ ತೆರವು
ಪಾಕಿಸ್ತಾನದ ಲಾಹೋರ್‌ವನಲ್ಲಿರುವ ಐತಿಹಾಸಿಕ ಜೈನ ದೇಗುಲವನ್ನು ತೆರವುಗೊಳಿಸಲಾಗಿದೆ .ಆರೆಂಜ್ ಲೈನ್ ಮೆಟ್ರೋ ಟ್ರೈನ್ (ಒಎಂಟಿ) ಯೋಜನೆಯ ...

Published On :
ನವದೆಹಲಿ: ಪಾಕಿಸ್ತಾನದ ಲಾಹೋರ್‌ವನಲ್ಲಿರುವ ಐತಿಹಾಸಿಕ ಜೈನ ದೇಗುಲವನ್ನು ತೆರವುಗೊಳಿಸಲಾಗಿದೆ .ಆರೆಂಜ್ ಲೈನ್ ಮೆಟ್ರೋ ಟ್ರೈನ್ (ಒಎಂಟಿ) ಯೋಜನೆಯ ಅಂಗವಾಗಿ ಈ ತೆರವು ಕಾರ್ಯ ನಡೆದಿದೆ.
ಜೈನ ದೇಗುಲ ಮಾತ್ರವಲ್ಲದೆ ಮಹಾರಾಜ ಕಟ್ಟಡ, ಕಪೂರ್ತಲಾ ಹೌಸ್ ಸೇರಿದಂತೆ ಹಲವಾರು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ದೇಗುಲವನ್ನು ತೆರವುಗೊಳಿಸುವ ಪಾಕಿಸ್ತಾನ ಸರ್ಕಾರದ ತೀರ್ಮಾನವನ್ನು ಪಂಜಾಬ್ ಅಸೆಂಬ್ಲಿಯ ವಿರೋಧ ಪಕ್ಷ ನಾಯಕ ಮಿಯಾ ಮೆಹಮೂದ್ ಉರ್ ರಶೀದ್ ಖಂಡಿಸಿದ್ದಾರೆ.
ಒಎಂಟಿಗಾಗಿ ಪಾಕ್ ಸರ್ಕಾರ ಬುಧವಾರ ದೇಗುಲವನ್ನು ತೆರವುಗೊಳಿಸಿದೆ. ಸುರಂಗ ಮಾರ್ಗವನ್ನು ನಿರ್ಮಿಸುವ ಮೂಲಕ ರೈಲ್ವೇ ಹಳಿ ನಿರ್ಮಿಸಬಹುದಿತ್ತು. ಹೀಗೆ ಮಾಡುತ್ತಿದ್ದರೆ ಚಾರಿತ್ರಿಕ ದೇಗುಲ ನಾಶವಾಗುತ್ತಿರಲಿಲ್ಲ ಎಂದು ರಶೀದ್ ಹೇಳಿದ್ದಾರೆ.
ಮೂರ ಮಹಡಿಗಳಿದ್ದ ಪುರಾತನ ದೇಗುಲ ಶಿಥಿಲಾವಸ್ಥೆಯಲ್ಲಿ ಇತ್ತು ಎನ್ನಲಾಗುತ್ತಿದೆ.
1992ರಲ್ಲಿ ಬಾಬರಿ ಮಸೀದಿ ಧ್ವಂಸವಾದಾಗ ಪಾಕ್ ನಲ್ಲಿ ಈ ಜೈನ ದೇವಾಲಯದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಹಾನಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


