ಝಿಕಾ ವೈರಸ್ ನಿಂದ ಮಕ್ಕಳಿಗೆ ಕಣ್ಣಿನ ದೋಷ
ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿಕಾ ವೈರಾಣು ರೋಗದಿಂದ ಮಕ್ಕಳಿಗೆ ದೃಷ್ಟಿ ದೋಷವೂ ಉಂಟಾಗುತ್ತದೆ...

Published On :
ವಾಷಿಂಗ್ಟನ್: ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿಕಾ ವೈರಾಣು ರೋಗದಿಂದ ಮಕ್ಕಳಿಗೆ ದೃಷ್ಟಿ ದೋಷವೂ ಉಂಟಾಗುತ್ತದೆ ಎಂದು ವರದಿಗಳು ಹೇಳಿವೆ.
ನವಜಾತ ಶಿಶುವಿನ ತಲೆ ಮತ್ತು ಮಿದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯಲು ಬಿಡದ ಝಿಕಾ ವೈರಸ್ ಮಗುವಿನ ದೃಷ್ಟಿ ದೋಷ ಉಂಟು ಮಾಡುತ್ತದೆ ಸಂಶೋಧನೆ ಹೇಳಿದೆ.
ಝಿಕಾ ವೈರಸ್ ಗೆ ಒಳಗಾದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ದೃಷ್ಟಿ ದೋಷ ಉಂಟಾಗಿರುವುದು ತಿಳಿದು ಬಂದಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ.
ಈ ಹಿಂದೆ ಲೈಂಗಿಕ ಕ್ರಿಯೆ ಮೂಲಕ ಝಿಕಾ ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ಇದೀಗ ಮತ್ತೊಂದು ವೈದ್ಯಕೀಯ ವರದಿಯ ಪ್ರಕಾರ, ಮನುಷ್ಯರ ಜೊಲ್ಲುರಸ, ಮೂತ್ರದಲ್ಲೂ ಝಿಕಾ ವೈರಾಣುಗಳಿರುವುದು ಪತ್ತೆಯಾಗಿದೆ. ಸೋಂಕಿಗೆ ಒಳಗಾಗಿರುವವರು ಮುತ್ತು ಕೊಡುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


