ಅಪ್ರಾಪ್ತೆ ಮೇಲೆ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ 140 ವರ್ಷ ಸೆರೆವಾಸ
ಬ್ರಿಟಿಷ್ ಅಪ್ರಾಪ್ತೆ ಮೇಲೆ ಸತತ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ ವೆಸ್ಟ್ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ಕ್ರೌನ್ ಕೋರ್ಟ್ 140 ವರ್ಷ ಜೈಲು ..

ವಾಷಿಂಗ್ಟನ್: ಬ್ರಿಟಿಷ್ ಅಪ್ರಾಪ್ತೆ ಮೇಲೆ ಸತತ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ ವೆಸ್ಟ್ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ಕ್ರೌನ್ ಕೋರ್ಟ್ 140 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸುಮಾರು 13 ತಿಂಗಳ ಕಾಲ ಅಂದರೆ 2011 ರಿಂದ 2012 ರವರೆಗೆ ಅಪ್ರಾಪ್ತೆ ಮೇಲೆ ಕಾರು ಪಾರ್ಕಿಂಗ್, ಚರ್ಚ್ ನ ಸ್ಮಶಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗಲಾಗಿತ್ತು.
ದಕ್ಷಿಣ ಏಷ್ಯಾ ಮೂಲದವರಾದ ಈ 12 ಮಂದಿಯಲ್ಲಿ 11 ಮಂದಿಗೆ ಜೈಲುವಾಸ, ಮತ್ತೊಬ್ಬ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ. ಈತ 16 ವರ್ಷ ಒಳಗಿನ ಮತ್ತೊಬ್ಬ ಬಾಲಕಿ ಜೊತೆ ಸೆಕ್ಸ್ ಮಾಡಿದ್ದ ಹಿನ್ನೆಲೆಯಲ್ಲಿ ಈತನಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಬಾಂಗ್ಲಾ ದೇಶಕ್ಕೆ ಪರಾರಿಯಾಗಿದ್ದಾನೆ ಎಂದು ವರದಿ ತಿಳಿಸಿದೆ. ಇನ್ನು ಈ ಗ್ಯಾಂಗ್ ನ ಹಲವು ಮಂದಿ ಮಕ್ಕಳ ಅಪಹರಣ, ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಕೋರ್ಟ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


