ಇಸೀಸ್ ನಿಂದ ಶಿರಚ್ಛೇಧಕ್ಕೊಳಗಾದ 20 ಉಗ್ರರ ಪೈಕಿ 4 ಭಾರತೀಯ ಉಗ್ರರು?
ಇಸೀಸ್ ನಿಂದ ಪರಾರಿಯಾಗಲು ಯತ್ನಿಸುತ್ತಿದ್ದ 20 ಉಗ್ರ ಸಹಚರರನ್ನು ಸ್ವತಃ ಇಸೀಸ್ ಉಗ್ರ ಸಂಘಟನೆಯೇ ಶಿರಚ್ಛೇಧ ಮಾಡಿ ಹತ್ಯೆ ಮಾಡಿದೆ.

ನವದೆಹಲಿ: ಇಸೀಸ್ ನಿಂದ ಪರಾರಿಯಾಗಲು ಯತ್ನಿಸುತ್ತಿದ್ದ 20 ಉಗ್ರ ಸಹಚರರನ್ನು ಸ್ವತಃ ಇಸೀಸ್ ಉಗ್ರ ಸಂಘಟನೆಯೇ ಶಿರಚ್ಛೇಧ ಮಾಡಿ ಹತ್ಯೆ ಮಾಡಿದೆ.
ಹತ್ಯೆಯಾದ 20 ಉಗ್ರರ ಪೈಕಿ 4 ಉಗ್ರರು ಭಾರತೀಯರೆಂದು ಶಂಕಿಸಲಾಗಿದ್ದು, ಈ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಕಲೆಹಾಕುತ್ತಿದೆ. ಹತ್ಯೆಗೀಡದವರ ಪೈಕಿ ಇದ್ದವರು ಭಾರತೀಯರೆ ಎಂಬುದನ್ನು ಈವರೆಗೂ ಭಾರತ ಸರ್ಕಾರ ಸ್ಪಷ್ಟಪಡಿಸಿಲ್ಲ.
ಇರಾಕ್ ನ ಮೊಸುಲ್ ನಗರದಿಂದ ಭಾರತೀಯ ಉಗ್ರರು ಸೇರಿದಂತೆ 20 ಉಗ್ರರು ಪರಾರಿಯಾಗಲು ಯತ್ನಿಸಿದ್ದರು. ಆದರೆ ಚೆಕ್ ಪಾಯಿಂಟ್ ನಲ್ಲಿ ತಪಾಸಣೆ ವೇಳೆ 20 ಜನ ಸಿಕ್ಕಿಬಿದಿದ್ದರು. ಪರಿಶೀಲನೆ ವೇಳೆ ಅವರೆಲ್ಲಾ ತಮ್ಮದೇ ಉಗ್ರ ಸಂಘಟನೆಯ ಕಾರ್ಯಕರ್ತರು ಎಂಬುದು ಇಸೀಸ್ ಉಗ್ರರಿಗೆ ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಕ್ಕಿಬಿದ್ದಿದ್ದ ಉಗ್ರರನ್ನು ಶರಿಯಾ ಕೋರ್ಟ್ ಗೆ ವಿಚಾರಣೆಗಾಗಿ ಕಳಿಸಲಾಗಿತ್ತು.
ವಿಚಾರಣೆ ವೇಳೆ ಇಸೀಸ್ ಉಗ್ರ ಸಂಘಟನೆಯಿಂದ ಪರಾರಿಯಾಗಲು ಯತ್ನಿಸಿದ್ದನ್ನು ರಾಜಧ್ರೋಹವೆಂದು ತೀರ್ಪು ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರೆದುರೇ 20 ಉಗ್ರರ ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ ಈ ವರೆಗೆ 23 ಭಾರತೀಯರು ಇಸೀಸ್ ಉಗ್ರ ಸಂಘಟನೆ ಸೇರಿದ್ದಾರೆ ಈ ಪೈಕಿ ಈಗಾಗಲೇ 6 ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


