ಇರಾಕ್ ನಲ್ಲಿ ಕಾರ್ ಬಾಂಬ್ ಸ್ಫೋಟ; ೨೫ ಸಾವು
ಇರಾಕ್ ನಗರ ಮೊಸುಲ್ ನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಮೂರು ಆತ್ಮಹತ್ಯಾ ಕಾರ್ ಬಾಬ್ ಗಳು ಸ್ಫೋಟಗೊಂಡಿದ್ದು ಕನಿಷ್ಠ ೨೫ ಜನ ಮೃತಪಟ್ಟಿದ್ದಾರೆ.

Published On :
ಬಾಗ್ದಾದ್: ಇರಾಕ್ ನಗರ ಮೊಸುಲ್ ನ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ಮೂರು ಆತ್ಮಹತ್ಯಾ ಕಾರ್ ಬಾಬ್ ಗಳು ಸ್ಫೋಟಗೊಂಡಿದ್ದು ಕನಿಷ್ಠ ೨೫ ಜನ ಮೃತಪಟ್ಟಿದ್ದಾರೆ.
ಈ ಸ್ಫೋಟದಲ್ಲಿ ಕನಿಷ್ಠ ೧೨ ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹೆಚ್ಚು ಜನನಿಬಿಡ ಮತ್ತು ಭದ್ರತಾ ಪಡೆಗಳು ನೆರೆದಿರುವ ಮೊಸುಲ್ ನ ಗೋಗಜಲಿ ಜಿಲ್ಲೆಯ ಮಾರುಕಟ್ಟೆ ಪ್ರದೇಶದಲ್ಲಿ ಈ ಭಯೋತ್ಪಾದಕ ಕೃತ್ಯ ನಡೆದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಭದ್ರತಾ ಪಡೆಗಳು ಜಿಲ್ಲೆಯನ್ನು ಸುತ್ತುವರೆದಿದ್ದು ಆ ಪ್ರದೇಶದಲ್ಲಿ ಇರಲಿವೆ ಎಂದು ನಂಬಲಾದ ಹೆಚ್ಚಿನ ಕಾರ್ ಬಾಂಬ್ ಗಳಿಗೆ ಶೋಧ ಕಾರ್ಯಾಚರಣೆ ನಡೆಸಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


