ವಿದೇಶ

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಿಮಾನ ವಾಹಕ ನೌಕೆಯ ಮೊದಲ ಫೈರ್ ಡ್ರಿಲ್

ದಕ್ಷಿಣ ಚೀನಾ ವಿವಾದದ ವಿಷಯದಲ್ಲಿ ಚೀನಾ ಮತ್ತೊಮ್ಮೆ ಬಲ ಪ್ರದರ್ಶನ ಮಾಡಿದ್ದು, ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ವಿಮಾನ ವಾಹಕ ನೌಕೆಯಿಂದ ಮೊದಲ ಫೈರ್ ಡ್ರಿಲ್ ನಡೆಸಿದೆ.

ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಿಮಾನ ವಾಹಕ ನೌಕೆಯ ಮೊದಲ ಫೈರ್ ಡ್ರಿಲ್
ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ವಿಮಾನ ವಾಹಕ ನೌಕೆಯ ಮೊದಲ ಫೈರ್ ಡ್ರಿಲ್
Published On :
ಬೀಜಿಂಗ್: ದಕ್ಷಿಣ ಚೀನಾ ವಿವಾದದ ವಿಷಯದಲ್ಲಿ ಚೀನಾ ಮತ್ತೊಮ್ಮೆ ಬಲ ಪ್ರದರ್ಶನ ಮಾಡಿದ್ದು, ವಿವಾದಿತ ದಕ್ಷಿಣ ಚೀನಾ ಸಮುದ್ರದಲ್ಲಿ ವಿಮಾನ ವಾಹಕ ನೌಕೆಯಿಂದ ಮೊದಲ ಫೈರ್ ಡ್ರಿಲ್ ನಡೆಸಿದೆ. 
ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ಬೃಹತ್ ಪ್ರಮಾಣದಲ್ಲಿ ಫೈರ್ ಡ್ರಿಲ್ (ತಾಲೀಮು) ನಡೆಸಿರುವ ಪರಿಣಾಮ ದಕ್ಷಿಣ ಚೀನಾ ಸಮುದ್ರದ ವಿವಾದದಲ್ಲಿ ಚೀನಾ ಹಾಗೂ ತೈವಾನ್ ಸೇರಿದಂತೆ ವಿವಾದಿತ ಪ್ರದೇಶದಲ್ಲಿ ಹಕ್ಕು ಪ್ರತಿಪಾದನೆ ಮಾಡುತ್ತಿರುವ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದಕ್ಷಿಣ ಚೀನಾ ಸಮುದ್ರದಲ್ಲಿ ಹಲವು ಹಡಗುಗಳು ಮತ್ತು ವಿಮಾನಗಳನ್ನೊಳಗೊಂಡ ಲೈಯಾವೋನಿಂಗ್ ವಿಮಾನ ವಾಹಕ ನೌಕೆ ತಾಲೀಮು ನಡೆಸಿದೆ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಹೇಳಿಕೆ ಬಿಡುಗಡೆ ಮಾಡಿದೆ. ವಿಮಾನ ವಾಹಕ ನೌಕೆಯ ಯುದ್ಧ ಸಾಮರ್ಥ್ಯವನ್ನು ಪರೀಕ್ಷಿಸಲು ಈ ತಾಲೀಮು ನಡೆಸಲಾಗಿದೆ ಎಂದು ಪಿಎಲ್ಎ ಸ್ಪಷ್ಟನೆ ನೀಡಿದೆ. 
ತಾಲೀಮು ನಡೆಸಿದ ನಿರ್ದಿಷ್ಟ ಸಮಯ ಹಾಗೂ ಪ್ರದೇಶದ ಬಗ್ಗೆ ಪಿಎಲ್ಎ ಮಾಹಿತಿ ನೀಡಲು ನಿರಾಕರಿಸಿದ್ದು, ವಿಮಾನ ವಾಹಕ ಯುದ್ಧ ನೌಕೆಯನ್ನು ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜಿಸಲು ಸಿದ್ಧತೆ ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚೀನಾ ಫೈರ್ ಡ್ರಿಲ್ ಗೆ ಬಳಕೆ ಮಾಡಿರುವ ಯುದ್ಧ ನೌಕೆ, ಕ್ಷಿಪಣಿ ಪ್ರತಿಬಂಧಕ ವ್ಯವಸ್ಥೆ ಹೊಂದಿದ್ದು ಸಮುದ್ರದಲ್ಲಿ ನಡೆಯುವ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದ್ದು ಫೈರ್ ಡ್ರಿಲ್
ನ ವಿಡಿಯೋ ತುಣುಕು  ಗಳನ್ನು ಚೀನಾ ಮಾಧ್ಯಮಗಳು ಪ್ರಸಾರ ಮಾಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.