250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಿದ ಅಫ್ಘಾನಿಸ್ಥಾನ
ಪಾಕಿಸ್ತಾನ- ಅಫ್ಘಾನಿಸ್ಥಾನ ಗಡಿ ಪ್ರದೇಶ ಚಮನ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಅಫ್ಘಾನಿಸ್ಥಾನ 250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಿದೆ.

ಪಾಕಿಸ್ತಾನ- ಅಫ್ಘಾನಿಸ್ಥಾನ ಗಡಿ ಪ್ರದೇಶ ಚಮನ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಅಫ್ಘಾನಿಸ್ಥಾನ 250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಿದೆ.
ಗಡಿ ಪ್ರದೇಶದಲ್ಲಿ ಸತತ 10 ದಿನಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಅಫ್ಘಾನಿಸ್ಥಾನದ ಪ್ರತಿಭಟನಾ ನಿರತರು ಎರಡು ರಾಷ್ಟ್ರಗಳ ನಡುವಿನ ಫ್ರೆಂಡ್ ಶಿಪ್ ಗೆಟ್ ಮೇಲೆ ದಾಳಿ ನಡೆಸಿ ಪಾಕಿಸ್ಥಾನದ ಧ್ವಜಕ್ಕೆ ಬೆಂಕಿ ಹಚ್ಚಿದ್ದ ಪರಿಣಾಮ ಆಗಸ್ಟ್ 19 ರಿಂದ ಬಾಬ್ ಇ ದೋಸ್ತಿ ಗೆಟ್ ನ್ನು ಮುಚ್ಚಲಾಗಿದೆ.
ಕಳೆದ 10 ದಿನಗಳಿಂದ ಸುಮಾರು 250 ಪಾಕಿಸ್ಥಾನಿ ನೌಕರರನ್ನು ಗಡಿಪಾರು ಮಾಡಲಾಗಿದೆ ಎಂದು ಕಾಬುಲ್ ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಾಬ್-ಈ-ದೋಸ್ತಿ ಗೆಟ್ ಮುಚ್ಚಲಾಗಿರುವ ಪರಿಣಾಮ ಪಾಕಿಸ್ತಾನ- ಅಫ್ಘಾನಿಸ್ಥಾನದ ನಡುವೆ ನಡೆಯುತ್ತಿದ್ದ ನ್ಯಾಟೋ ಸಾಗಣೆ ಸೇರಿದಂತೆ ವಾಣಿಜ್ಯ ವಹಿವಾಟುಗಳು ಸ್ಥಗಿತಗೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


