ವಿದೇಶ

ಎನ್ ಎಸ್ ಜಿ ಸದಸ್ಯತ್ವಕ್ಕಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಲಾಬಿ

ಪರಮಾಣು ಸರಬರಾಜು ಸಂಘ (ಎನ್ ಎಸ್ ಜಿ) ಸದಸ್ಯತ್ವಕ್ಕಾಗಿ ಪಾಕಿಸ್ತಾನ ಮನವಿ ಮಾಡಿದ್ದು, ಇಸ್ಲಮಾಬಾದ್ ಪರಮಾಣು ಸರಕ್ಷಿತಾ ಕ್ರಮಗಳನ್ನು ಖಚಿತವಾಗಿ ಅನುಸರಿಸಿದ್ದು,

ಎನ್ ಎಸ್ ಜಿ ಸದಸ್ಯತ್ವಕ್ಕಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಲಾಬಿ
ಸಾಂದರ್ಭಿಕ ಚಿತ್ರ
Published On :
ಇಸ್ಲಮಾಬಾದ್: ಪರಮಾಣು ಸರಬರಾಜು ಸಂಘ (ಎನ್ ಎಸ್ ಜಿ) ಸದಸ್ಯತ್ವಕ್ಕಾಗಿ ಪಾಕಿಸ್ತಾನ ಮನವಿ ಮಾಡಿದ್ದು, ಇಸ್ಲಮಾಬಾದ್ ಪರಮಾಣು ಸರಕ್ಷಿತಾ ಕ್ರಮಗಳನ್ನು ಖಚಿತವಾಗಿ ಅನುಸರಿಸಿದ್ದು, ಸದಸ್ಯತ್ವಕ್ಕೆ ತಾವು ಅರ್ಹ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ತಿಳಿಸಿದೆ. 
ಪರಮಾಣು ತಂತ್ರಜ್ಞಾನದ ಜಾಗತಿಕ ಮಾರಾಟವನ್ನು ನಿಯಂತ್ರಿಸುವ 48 ರಾಷ್ಟ್ರಗಳ ಸಮಿತಿ ಎನ್ ಎಸ್ ಜಿ. 
"ಯಾವುದೇ ಬೇಧಭಾವವಿಲ್ಲದೆ ನಮಗೆ ಎನ್ ಎಸ್ ಜಿ ಸದಸ್ಯತ್ವವನ್ನು ವಿಸ್ತರಿಸಲಾಗುವುದು ಮತ್ತು ಇದರಿಂದ ಪರಮಾಣು ಪ್ರಸರಣ ನಿಷೇಧ ಜಾಗತಿಕ ಆಡಳಿತವನ್ನು ಬಲಪಡಿಸದಂತಾಗುವುದು" ಎಂದು ವಿಶ್ವಸಂಸ್ಥೆಯ ಪಾಕಿಸ್ತಾನ ಪ್ರತಿನಿಧಿ ಮಲೀಹಾ ಲೋಧಿ ಹೇಳಿರುವುದಾಗಿ ಡಾನ್ ಆನ್ಲೈನ್ ಪತ್ರಿಕೆ ಗುರುವಾರ ವರದಿ ಮಾಡಿದೆ. 
ಮಾರಣ ಹೋಮದ ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ನಿಷೇಧದ ಬಗ್ಗೆ ಮಾತನಾಡಿರುವ ಲೋಧಿ ಸಮಗ್ರ ರಫ್ತು ನಿಯಂತ್ರಣ ಆಡಳಿತವನ್ನು ಪಾಕಿಸ್ತಾನ ನೆರವೇಸಿದೆ ಹಾಗು ಪರಮಾಣು ಸುರಕ್ಷಾ ಸಮಾವೇಶದ ಯೋಜನೆಯಲ್ಲಿ ಕೂಡ ಭಾಗವಹಿಸಿದೆ ಎಂದು ಹೇಳಿದ್ದಾರೆ. 
ಹಾಗೆಯೇ ಯಾವುದೇ ಪರಮಾಣು ಶಸ್ತ್ರಾಸ್ತ್ರ ಪ್ರಯೋಗವನ್ನು ತಾತ್ಕಾಲಿಕವಾಗಿ ಪಾಕಿಸ್ತಾನ ರದ್ದುಗೊಳಿಸಿದ್ದು, ಭಾರದ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಿ, ಇದನ್ನು ಸಂಪೂರ್ಣವಾಗಿ ನಿಷೇಧಿಸುವ ಪ್ರಕ್ರಿಯೆಯು ಜಾರಿಯಲ್ಲಿದೆ ಎಂದಿರುವ ಅವರು ಆದುದರಿಂದ ಎನ್ ಎಸ್ ಜಿ ಸದಸ್ಯತ್ವಕ್ಕೆ ಪಾಕಿಸ್ತಾನ ಅರ್ಹ ಎಂದು ವಾದ ಮಾಡಿದ್ದಾರೆ. 
ಪರಮಾಣು ಪ್ರಸರಣಾ ನಿಷೇಧ ಒಪ್ಪಂದಕ್ಕೆ ಸಹಿ ಹಾಕದ ಭಾರತ ಮತ್ತು ಪಾಕಿಸ್ತಾನ ದೇಶಗಳು ಎನ್ ಎಸ್ ಜಿ ಸದಸ್ಯತ್ವ ಪಡೆಯಲು ಹವಣಿಸುತ್ತಿವೆ. ಕಳೆದ ಸಭೆಯಲ್ಲಿ ಚೈನಾ ಸೇರಿದಂತೆ ಕನಿಷ್ಠ 10 ದೇಶಗಳು ಭಾರತದ ಸದಸ್ಯತ್ವವನ್ನು ವಿರೋಧಿಸಿದ್ದವು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.