ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ಲೋಕಾರ್ಪಣೆ ಮಾಡಿದ ಚೀನಾ
ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.

ಬೀಜಿಂಗ್: ವಿವಿಧ ಬಗೆಯ ವಿನೂತ ನಿರ್ಮಾಣಗಳನ್ನು ಮಾಡುವ ಮೂಲಕ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಚೀನಾ ಇದೀಗ ಮತ್ತೊಂದು ವಿಶ್ವದಾಖಲೆಯ ಗಾಜಿನ ಸೇತುವೆಯನ್ನು ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ.
ಚೀನಾದ ಹುನಾನ್ ಪ್ರಾಂತ್ಯದಲ್ಲಿ ಬೃಹತ್ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದ್ದು, ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆ ಎಂಬ ಖ್ಯಾತಿಗೆ ಒಳಗಾಗಿದೆ. ಹುನಾನ್ ಪ್ರಾಂತ್ಯದಲ್ಲಿರುವ ಎರಡು ಬೆಟ್ಟಗಳ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಈ ಸೇತುವೆ ಸಮುದ್ರಮಟ್ಟದಿಂದ ಸುಮಾರು 1,410 ಅಡಿ (430 ಮೀಟರ್) ಎತ್ತರದಲ್ಲಿದೆ.
ಪ್ರವಾಸಿಗರ ಆಕರ್ಷಣೆಗೆ ತಯಾರಾಗಿರುವ ಸೇತುವೆಯಲ್ಲಿ ಮೂರು ಪದರ ಗಾಜಿನ ಕೋಟಿಂಗ್ ಇದ್ದು, ಇದರ ಮೇಲೆ ನಡೆದುಕೊಂಡು ಆಳದ ಭೂಮಿಯ ವೀಕ್ಷಣೆ ಮಾಡುವುದು ರೋಮಾಂಚನ ಎಂದು ಬಣ್ಣಿಸಲಾಗಿದೆ. ಈ ಬೃಹತ್ ಸೇತುಗೆ 3 ಪದರಗಳ 99 ಬೃಹತ್ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಈ ಗಾಜಿನ ಸೇತುವೆ ನಿರ್ಮಾಣಕ್ಕಾಗಿ ಚೀನಾ ಸುಮಾರ 3.4 ಬಿಲಿಯನ್ ವ್ಯಯಿಸಿದೆ.
ಮೂಲಗಳ ಪ್ರಕಾರ ಈ ಬೃಹತ್ ಸೇತುವೆ 6 ಮೀಟರ್ ಅಗಲವಿದ್ದು, ಇಸ್ರೇಲ್ ಮೂಲದ ನಿರ್ಮಾಣ ಸಂಸ್ಥೆ ಹೇಮ್ ಡೊಟಾನ್ ಈ ಗಾಜಿನ ಸೇತುವೆಯನ್ನು ನಿರ್ಮಿಸಿದೆ. ಆ ಮೂಲಕ ವಿಶ್ವದ ಅತೀ ದೊಡ್ಡ ಗಾಜಿನ ಸೇತುವೆ ನಿರ್ಮಾಣ ಮಾಡಿದ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ಇನ್ನು ಪ್ರತೀ ದಿನ ಈ ಸೇತುವೆ ವೀಕ್ಷಣೆಗೆ ಗರಿಷ್ಠ 8 ಸಾವಿರ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಜೂನ್ನಲ್ಲಿ ರಕ್ಷಣೆ ಪರೀಕ್ಷೆ ನಡೆಸಿದ್ದ ಚೀನಾ ಇದೀಗ ಸೇತುವೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.
‘ಅವತಾರ್’ ಎಂಬ ಹಾಲಿವುಡ್ನ ಸೂಪರ್ಹಿಟ್ ಚಿತ್ರದ ಕೆಲಭಾಗವನ್ನು ಇದೇ ತಿಯಾನ್ಮನ್ ಮೌಂಟೇನ್ ನ್ಯಾಷನಲ್ ಪಾರ್ಕ್ ಬೆಟ್ಟದ ತಪ್ಪಲಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂಬುದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


