ವಿದೇಶ

ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ಭಾರತದ ನೆರವು ಕೇಳಿಲ್ಲ: ಚೀನಾ

ಇತ್ತೀಚಿಗೆಗಷ್ಟೇ ನಡೆದ ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿಯಲ್ಲಿ ದಕ್ಷಿಣ ಚೀನಾ ಸಮುದ್ರದ ವಿಷಯ ಪ್ರಸ್ತಾಪವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತಾದರೂ, ಬೀಜಿಂಗ್ ಈ ವಿಚಾರವನ್ನು ಅಲ್ಲಗಳೆದಿದೆ.

ದಕ್ಷಿಣ ಚೀನಾ ಸಮುದ್ರ ವಿಚಾರದಲ್ಲಿ ಭಾರತದ ನೆರವು ಕೇಳಿಲ್ಲ: ಚೀನಾ
ಚೀನಾ
Published On :

ಬೀಜಿಂಗ್:ಇತ್ತೀಚಿಗೆಗಷ್ಟೇ ನಡೆದ ಭಾರತ-ಚೀನಾ ವಿದೇಶಾಂಗ ಸಚಿವರ ಭೇಟಿಯಲ್ಲಿ ದಕ್ಷಿಣ ಚೀನಾ ಸಮುದ್ರದ ವಿಷಯ ಪ್ರಸ್ತಾಪವಾಗಲಿದೆ ಎಂದು ವಿಶ್ಲೇಷಿಸಲಾಗಿತ್ತಾದರೂ, ಬೀಜಿಂಗ್ ಈ ವಿಚಾರವನ್ನು ಅಲ್ಲಗಳೆದಿದೆ.

ಚೀನಾ ವಿದೇಶಾಂಗ ಸಚಿವರು ತಮ್ಮ ಭಾರತ ಭೇಟಿಯಲ್ಲಿ ದಕ್ಷಿಣ ಚೀನಾ ಸಮುದ್ರ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಬಳಿ ಸಹಾಯ ಕೇಳಿಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಪ್ರಕಟಿಸಿದ ಲೇಖನದಲ್ಲಿ ಹೇಳಿದೆ. ದಕ್ಷಿಣ ಚೀನಾ ಸಮುದ್ರ ವಿವಾದದ ಇತಿಹಾಸವನ್ನು ಪ್ರಸ್ತಾಪಿಸಿರುವ ಭಾರತೀಯ ಮಾಧ್ಯಮಗಳ ಬಗ್ಗೆ ಚೀನಾ ಮಾಧ್ಯಮ ಕಿಡಿಕಾರಿದೆ. ಆದರೆ ಭಾರತ ಸರ್ಕಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸದೆ, ದಕ್ಷಿಣ ಚೀನಾ ಸಮುದ್ರದ ಬಗ್ಗೆ ಅಮೆರಿಕ, ಜಪಾನ್ ನ ಒತ್ತಡದ ನಡುವೆಯೂ ಭಾರತ ಸರ್ಕಾರ ತಟಸ್ಥ ನಿಲುವು ಹೊಂದಿದೆ ಎಂದು ಹೇಳಿದೆ.   
ದಕ್ಷಿಣ ಚೀನಾ ಸಮುದ್ರದ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ತೀರ್ಪು ಪ್ರಕಟಿಸಿದ ನಂತರ ಭಾರತ ಸರ್ಕಾರ ಭದ್ರತೆ ವಿಷಯದಲ್ಲಿ ತಟಸ್ಥ ನಿಲುವು ಹೊಂದಿದೆ. ಆದರೆ ಚೀನಾ ವಿದೇಶಾಂಗ ಸಚಿವರ ಭಾರತ ಭೇಟಿ ವೇಳೆ ದಕ್ಷಿಣ ಚೀನಾ ಸಮುದ್ರದ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ನೆರವು ಕೇಳಲಾಗಿಲ್ಲ ಎಂದು ಚೀನಾ ಮಾಧ್ಯಮ ತನ್ನ ಲೇಖನದಲ್ಲಿ ಪ್ರಕಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.