ವಿದೇಶ

ದಕ್ಷಿಣ ಚೀನಾ ಸಮುದ್ರದ ತೀರ್ಪು: ಭಾರತದಿಂದ ಸಹಾಯ ಕೇಳಲು ಚೀನಾ ಯತ್ನ

ಪರಮಾಣು ಪೂರೈಕೆ ಸಮೂಹಕ್ಕೆ (ಎನ್ ಎಸ್ ಜಿ) ಕ್ಕೆ ಸೇರ್ಪಡೆಗೊಳ್ಳುವ ಭಾರತದ ಮಹತ್ವಾಕಾಂಕ್ಷೆಗೆ ಅಡ್ಡಿ ಪಡಿಸಿದ್ದ ಚೀನಾ ಈಗ ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಭಾರತದ ನೆರವನ್ನು ಕೋರಲು ಮುಂದಾಗಿದೆ.

ದಕ್ಷಿಣ ಚೀನಾ ಸಮುದ್ರದ ತೀರ್ಪು: ಭಾರತದಿಂದ ಸಹಾಯ ಕೇಳಲು ಚೀನಾ ಯತ್ನ
ಚೀನಾದ ವಿದೇಶಾಂಗ ಇಲಾಖೆ ಸಚಿವ ವಾಂಗ್ ಯಿ
Published On :

ಬೀಜಿಂಗ್: ಪರಮಾಣು ಪೂರೈಕೆ ಸಮೂಹಕ್ಕೆ (ಎನ್ ಎಸ್ ಜಿ) ಕ್ಕೆ ಸೇರ್ಪಡೆಗೊಳ್ಳುವ ಭಾರತದ ಮಹತ್ವಾಕಾಂಕ್ಷೆಗೆ ಅಡ್ಡಿ ಪಡಿಸಿದ್ದ ಚೀನಾ ಈಗ ದಕ್ಷಿಣ ಚೀನಾ ಸಮುದ್ರ ವಿಷಯದಲ್ಲಿ ಭಾರತದ ನೆರವನ್ನು ಕೋರಲು ಮುಂದಾಗಿದೆ.

ವಿಶ್ವಸಂಸ್ಥೆಯ ನ್ಯಾಯಮಂಡಳಿ ದಕ್ಷಿಣ ಚೀನಾ ಸಮುದ್ರ ವಿಚಾರವಾಗಿ ಚೀನಾ ವಿರುದ್ಧ ತೀರ್ಪು ನೀಡಿರುವುದು ಚೀನಾವನ್ನು ಸಂಕಷ್ಟಕ್ಕೀಡುಮಾಡಿದ್ದು, ಈಗ ಚೀನಾ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಯತ್ನಿಸುತ್ತಿದೆ. ಇದರ ಭಾಗವಾಗಿ ಭಾರತದ ಬೆಂಬಲವನ್ನು ಪಡೆಯುವುದಕ್ಕೂ ಚೀನಾ ಯತ್ನಿಸುತ್ತಿದ್ದು, ಈ ಬಗ್ಗೆ ಚರ್ಚಿಸಲು ಚೀನಾದ ವಿದೇಶಾಂಗ ಇಲಾಖೆ ಸಚಿವ ವಾಂಗ್ ಯಿ ಆಗಸ್ಟ್ 12 ಕ್ಕೆ ಭಾರತಕ್ಕೆ ಆಗಮಿಸಲಿದ್ದಾರೆ.

ಮೂರೂ ದಿನಗಳ ಭಾರತ ಪ್ರವಾಸದಲ್ಲಿರಲಿರುವ ಚೀನಾದ ವಿದೇಶಾಂಗ ಸಚಿವ, ಮುಂಬರುವ ಜಿ 20 ಸಭೆಯಲ್ಲಿ ದಕ್ಷಿಣ ಚೀನಾ ಸಮುದ್ರ ವಿಷಯವನ್ನು ಪ್ರಸ್ತಾಪಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಲಿದ್ದಾರೆ. ಸೆಪ್ಟೆಂಬರ್ 3 ರಂದು ನಡೆಯಲಿರುವ ಜಿ 20 ಸಭೆ ನಡೆಯಲಿದ್ದು ಸಭೆಯಲ್ಲಿ ಭಾಗವಹಿಸಲಿರುವ ವಿಶ್ವ ನಾಯಕರು ದಕ್ಷಿಣ ಚೀನಾ ಸಮುದ್ರ ವಿಷಯವನ್ನು ಚರ್ಚೆ ಮಾಡುವ ನಿರೀಕ್ಷೆ ಇದೆ.

ಫಿಲಿಪೈನ್ಸ್ ದಕ್ಷಿಣ ಚೀನಾ ಸಮುದ್ರದಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ವಿರೋಧಿಸಿ ವಿಶ್ವಸಂಸ್ಥೆಯ ಅಂಗವಾಗಿರುವ ಯುಎನ್ ಸಿಎಲ್ ಒಎಸ್ ನಲ್ಲಿ ದಾವೆ ಹೂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವ ವಿಶ್ವ ಸಂಸ್ಥೆ ನ್ಯಾಯಮಂಡಳಿ ಚೀನಾಗೆ ದಕ್ಷಿಣ ಚೀನಾ ಸಮುದ್ರದ ಮೇಲೆ ಐತಿಹಾಸಿಕ ಹಕ್ಕು ಇಲ್ಲ ಎಂದು ಹೇಳಿತ್ತು. ಅಮೆರಿಕ, ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಚೀನಾಗೆ ನ್ಯಾಯಮಂಡಳಿಯ ತೀರ್ಪನ್ನು ಒಪ್ಪಿಕೊಳ್ಳುವಂತೆ ಸಲಹೆ ನೀಡಿದೆ. ಆದರೆ ಚೀನಾ ಮಾತ್ರ ನ್ಯಾಯಮಂಡಳಿ ತೀರ್ಪನ್ನು ವಿರೋಧಿಸಿ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಯತ್ನಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.