ವಿದೇಶ

ಕೃತಕ ದ್ಪೀಪಗಳ ಬಳಿಕ ತೇಲುವ ಅಣುಸ್ಥಾವರ ನಿರ್ಮಾಣದತ್ತ ಚೀನಾ ಚಿತ್ತ

ದಕ್ಷಿಣ ಏಷ್ಯಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಾಣ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ದೇಶ ಇದೀಗ ಮತ್ತದೇ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ತೇಲುವ ಅಣು ಸ್ಥಾವರಗಳನ್ನು ನಿರ್ಮಾಣ ಮಾಡುವತ್ತ ಗಮನ ಕೇಂದ್ರೀಕರಸಿದೆ ಎಂದು ತಿಳಿದುಬಂದಿದೆ...

ಕೃತಕ ದ್ಪೀಪಗಳ ಬಳಿಕ ತೇಲುವ ಅಣುಸ್ಥಾವರ ನಿರ್ಮಾಣದತ್ತ ಚೀನಾ ಚಿತ್ತ
ಚೀನಾದಿಂದ ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ತೇಲುವ ಅಣುಸ್ಥಾವರ ಯೋಜನೆ (ಸಾಂದರ್ಭಿಕ ಚಿತ್ರ)
Published On :

ಹಾಂಗ್‌ಕಾಂಗ್: ದಕ್ಷಿಣ ಏಷ್ಯಾ ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ನಿರ್ಮಾಣ ಮಾಡಿ ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ ದೇಶ ಇದೀಗ ಮತ್ತದೇ ದಕ್ಷಿಣ ಹಿಂದೂ  ಮಹಾಸಾಗರದಲ್ಲಿ ತೇಲುವ ಅಣು ಸ್ಥಾವರಗಳನ್ನು ನಿರ್ಮಾಣ ಮಾಡುವತ್ತ ಗಮನ ಕೇಂದ್ರೀಕರಸಿದೆ ಎಂದು ತಿಳಿದುಬಂದಿದೆ.

ಖ್ಯಾತ ಆಂಗ್ಲ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿರುವಂತೆ, ವಿವಾದಿತ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಚೀನಾದ ರಕ್ಷಣಾ ಇಲಾಖೆ ಕೃತಕ ತೇಲುವ ಅಣುಸ್ಥಾವರವನ್ನು ನಿರ್ಮಾಣ  ಮಾಡಲು ಮುಂದಾಗಿದೆ ಎಂದು ವರದಿ ಮಾಡಿದೆ. ಮಾನವ ನಿರ್ಮಿತ ದ್ವೀಪದಲ್ಲಿ ರೆಡಾರ್ ವ್ಯವಸ್ಥೆ, ಲೈಟ್‌ಹೌಸ್‌ಗಳು, ಸೈನಿಕರಿಗೆ ವಸತಿ, ಬಂದರು ಮತ್ತು ವಾಯುನೆಲೆ ನಿರ್ಮಾಣವಾಗಲಿದ್ದು,  ಅವುಗಳಿಗೆ ಅಗತ್ಯವಿರುವ ವಿದ್ಯುತ್ ಪೂರೈಸಲು ತೇಲುವ ಅಣು ಸ್ಥಾವರದ ಯೋಜನೆ ರೂಪಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಚೀನಾದ ಸರ್ಕಾರಿ ಸ್ವಾಮ್ಯದ ಶಿಪ್‌ಬಿಲ್ಡಿಂಗ್ ಇಂಡಸ್ಟ್ರಿ ಈ ವಿವಾದಿತ ಯೋಜನೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ದೊಡ್ಡ ಹಡಗಿನ ಮಾದರಿಯಲ್ಲೇ ಈ ಅಣು ಸ್ಥಾವರ ಇರಲಿದ್ದು,  ಯೋಜನೆ ಚೀನಾದ ಪಂಚವಾರ್ಷಿಕ ಯೋಜನೆಯ ಪಟ್ಟಿಯಲ್ಲಿದೆ ಎಂದು ವರದಿ ಮಾಡಿದೆ. ಅಂತೆಯೇ ಈ ವಿವಾದಿತ ಯೋಜನೆ 2020ರ ವೇಳೆಗೆ ಕಾರ್ಯಾರಂಭಿಸಲಿದೆ ಎಂದೂ ವರದಿ  ಮಾಡಿದೆ.

ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಚೀನಾದಲ್ಲಿ ಹೆಚ್ಚಿನ ಸಂಖ್ಯೆಯ ನಾಗರಿಕ ಅಣು ಸ್ಥಾವರಗಳಿದ್ದು, ಆದರೆ ತೇಲುವ ಅಣು ಸ್ಥಾವರ ನಿರ್ಮಾಣ ಇದೇ ಮೊದಲೇನಲ್ಲ. 1960ರಲ್ಲಿ ಅಮೆರಿಕ  ಪನಾಮ ಕಾಲುವೆ ಪ್ರದೇಶಕ್ಕೆ ವಿದ್ಯುತ್ ಒದಗಿಸುವ ಸಲುವಾಗಿ ತೇಲುವ ಅಣುಸ್ಥಾವರ ನಿರ್ಮಿಸಿತ್ತು. ಇದೀಗ ಚೀನಾ ಸರ್ಕಾರ ಇದೇ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ತೇಲುವ  ಅಣುಸ್ಥಾವರ ನಿರ್ಮಾಣಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.