ಐಎಸ್ಐಎಸ್ ಉಗ್ರರಿಂದ ಸೆಕ್ಸ್ ಗೆ ನಿರಾಕರಿಸಿದ 250 ಬಾಲಕಿಯರ ಬರ್ಬರ ಹತ್ಯೆ
ಐಎಸ್ಐಎಸ್ ಉಗ್ರರು ಮತ್ತೊಂದು ಪೈಶಾಚಿಕ ಕೃತ್ಯವೆಸಗಿದ್ದಾರೆ. ಉತ್ತರ ಇರಾಕ್ ನ ಎರಡನೇ ಅತಿ ದೊಡ್ಡ ನಗರ ಮಸೂಲ್ ನಲ್ಲಿ ಸೆಕ್ಸ್ ಗೆ...

Published On :
ಲಂಡನ್: ಐಎಸ್ಐಎಸ್ ಉಗ್ರರು ಮತ್ತೊಂದು ಪೈಶಾಚಿಕ ಕೃತ್ಯವೆಸಗಿದ್ದಾರೆ. ಉತ್ತರ ಇರಾಕ್ ನ ಎರಡನೇ ಅತಿ ದೊಡ್ಡ ನಗರ ಮಸೂಲ್ ನಲ್ಲಿ ಸೆಕ್ಸ್ ಗೆ ಅಡಿಯಾಳಾಗದ 250 ಬಾಲಕಿಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಉಗ್ರರು ತಾವು ಬಲವಂತವಾಗಿ ಮದುವೆಯಾಗಿದ್ದ ಬಾಲಕಿಯರನ್ನು ಹತ್ಯೆ ಮಾಡಿದ್ದಾರೆ ಎಂದು ಲಂಡನ್ ಮೂಲದ ಕುರ್ದಿಶ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ ಕೆಲವು ಬಾಲಕಿಯರನ್ನು ಅವರ ಕುಟುಂಬದವರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸೆಕ್ಸ್ ಜಿಹಾದ್ ಅನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕನಿಷ್ಠ 250 ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಈ ಪೈಕಿ ಐಎಸ್ಐಎಸ್ ಉಗ್ರರ ಮನವಿಯನ್ನು ಒಪ್ಪಿಕೊಳ್ಳದ ಕೆಲವು ಬಾಲಕಿಯರನ್ನು ಅವರ ಕುಟುಂಬದವರೇ ಹತ್ಯೆ ಮಾಡಿದ್ದಾರೆ ಎಂದು ಕುರ್ದಿಶ್ ಡೆಮೊಕ್ರಟಿಕ್ ಪಕ್ಷದ ವಕ್ತಾರ ಮಮುಜಿನ್ ಹೇಳಿರುವುದಾಗಿ ವರದಿ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


