ವಿದೇಶ

ಅಫ್ಘಾನಿಸ್ಥಾನ ಪ್ರವಾಹ; ಮೂವತ್ತು ಸಾವು

ರಾತ್ರೋರಾತ್ರಿ ಉಂಟಾದ ಪ್ರವಾಹದಿಂದಾಗಿ ಅಫ್ಘಾನಿಸ್ಥಾನದಲ್ಲಿ ಕನಿಷ್ಠ ೩೦ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ಥಾನ ಪ್ರವಾಹ; ಮೂವತ್ತು ಸಾವು
ಸಾಂದರ್ಭಿಕ ಚಿತ್ರ
Published On :

ಕಾಬುಲ್: ರಾತ್ರೋರಾತ್ರಿ ಉಂಟಾದ ಪ್ರವಾಹದಿಂದಾಗಿ ಅಫ್ಘಾನಿಸ್ಥಾನದಲ್ಲಿ ಕನಿಷ್ಠ ೩೦ ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಘ್ಲಾನ್ ಪ್ರಾಂತ್ಯದ ಬರ್ಕಾ ಜಿಲ್ಲೆಯಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹ ೧೨ ಜನರನ್ನು ಮತ್ತು ಹಲವು ಮನೆಗಳನ್ನು ಕೊಚ್ಚಿಕೊಂಡು ಹೋಗಿದೆ. ಸಮಾಘನ್ ಪ್ರಾಂತ್ಯದಲ್ಲಿ ಆರು ಜನ ಮೃತ ಪಟ್ಟಿದ್ದಾರೆ ಎಂದು ನೈಸರ್ಗಿಕ ವಿಕೋಪ ನಿರ್ವಹಣಾ ನಿಗಮದ ಅಧಿಕಾರಿ ಹೇಳಿದಾರೆ.

ಭಾನುವಾರ ರಾತ್ರಿ ಬಾಂಗಿ ಮತ್ತು ಹತ್ತಿರದ ಗ್ರಾಮಗಳಲ್ಲಿ ಕೂಡ ೧೨ ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ಅಬ್ದುಲ್ ರಜಾಕ್ ಜಿಂದಾ ತಿಳಿಸಿದ್ದಾರೆ.

ಶನಿವಾರ ರಾತ್ರಿ ಕೂಡ ಪಶ್ಚಿಮ ಬಾಘ್ದಿಸ್ ಪ್ರಾಂತ್ಯದಲ್ಲಿ ಅಕಾಲಿಕ ಮಳೆ ಮತ್ತು ಪ್ರವಾಹ ೨೩ ಜನರನ್ನು ಬಲಿ ತೆಗೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.