ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಇಸ್ಲಾಮಿಕ್ ಸಹಕಾರ ಸದಸ್ಯ ರಾಷ್ಟ್ರಗಳ ಪ್ರತಿಜ್ಞೆ
ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆ, ತೀವ್ರವಾದವನ್ನು ಮಣಿಸುವ ಪ್ರತಿಜ್ಞೆ ಮಾಡಿವೆ.

ಇಸ್ತಾಂಬುಲ್: ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳು (ಒಐಸಿ) ಭಯೋತ್ಪಾದನೆ, ತೀವ್ರವಾದವನ್ನು ಮಣಿಸುವ ಪ್ರತಿಜ್ಞೆ ಮಾಡಿವೆ.
ಇಸ್ಲಾಂ ನ ಬೋಧನೆಗಳನ್ನು ತಪ್ಪಾಗಿ ಅರ್ಥೈಸುತ್ತಿರುವ ಭಯೋತ್ಪಾದಕರು ಹಾಗೂ ತೀವ್ರವಾದಿಗಳ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ, ಸಹಿಷ್ಣುತೆಯನ್ನು ಪಾಲಿಸುವುದೇ ಇಸ್ಲಾಂ ನ ನೈಜ ಲಕ್ಷಣ ಎಂದು ಇಸ್ಲಾಮಿಕ್ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಈಜಿಪ್ಟ್ ನ ವಿದೇಶಾಂಗ ಇಲಾಖೆಯ ಉಪಸಚಿವ ಹಿಶಾಮ್ ಬದ್ರ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಡಲು ಇಸ್ಲಾಮಿಕ್ ಜಗತ್ತಿಗೆ ಆಧುನೀಕರಣ ಹಾಗೂ ಒಗ್ಗಟ್ಟಿನ ಕಾರ್ಯತಂತ್ರದ ಅವಶ್ಯಕತೆ ಇದೆ ಎಂದು ಬದ್ರ್ ಅಭಿಪ್ರಾಯಪಟ್ಟಿದ್ದಾರೆ. ನಮ್ಮ ಎಲ್ಲಾ ತ್ಯಾಗಗಳ ನಡುವೆಯೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಜಯಗಳಿಸುತ್ತೇವೆ ಎಂದು ಬದ್ರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆರ್ಡಿನೇಶನ್ (ಒಐಸಿ) ಯ 13 ನೇ ಸಮ್ಮೇಳನದಲ್ಲಿ ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲಾಜೀಜ್ ಹಾಗೂ ಇರಾನ್ ನ ಅಧ್ಯಕ್ಷ ಹಸನ್ ರೌಹಾನಿ ಸೇರಿದಂತೆ ೫೦ ದೇಶಗಳ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


