ವಿದೇಶ

ಅಪ್ರಸ್ತುತ ಸಂಸ್ಥೆಯಾಗುವುದರ ಬಗ್ಗೆ ಮೋದಿಯ ಎಚ್ಚರಿಕೆ: ವಿಶ್ವಸಂಸ್ಥೆಯಿಂದ ಸ್ವಸಮರ್ಥನೆ

ಭಯೋತ್ಪಾದನೆಯ ನಿರ್ಮೂಲನೆ ವಿಷಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿರುವ ವಿಶ್ವಸಂಸ್ಥೆ "ಅಪ್ರಸ್ತುತವಾಗುವ ಅಪಾಯ" ಎದುರಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ...

ಅಪ್ರಸ್ತುತ ಸಂಸ್ಥೆಯಾಗುವುದರ ಬಗ್ಗೆ ಮೋದಿಯ ಎಚ್ಚರಿಕೆ: ವಿಶ್ವಸಂಸ್ಥೆಯಿಂದ ಸ್ವಸಮರ್ಥನೆ
ವಿಶ್ವಸಂಸ್ಥೆ
Published On :

ಯುನೈಟೆಡ್ ನೇಷನ್ಸ್: ಭಯೋತ್ಪಾದನೆಯ ನಿರ್ಮೂಲನೆ ವಿಷಯದಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲವಾಗುತ್ತಿರುವ ವಿಶ್ವಸಂಸ್ಥೆ "ಅಪ್ರಸ್ತುತವಾಗುವ ಅಪಾಯ" ಎದುರಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವಸಂಸ್ಥೆ ತನ್ನನ್ನು ಸಮರ್ಥಿಸಿಕೊಂಡಿದೆ.

ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ವಿಶ್ವಸಂಸ್ಥೆಯ ನಡೆಯನ್ನು ಸಮರ್ಥಿಸಿಕೊಂಡಿದ್ದು, ಉಗ್ರವಾದವನ್ನು ನಿರ್ಮೂಲನೆ ಮಾಡಲು ವಿಶ್ವ ಸಂಸ್ಥೆ ಜವಾಬ್ದಾರಿಯುತ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ. "ಭಯೋತ್ಪಾದಕರ ಸ್ಫೋಟ ಪ್ರಕಾರಣಗಳು ಹಾಗೂ ಉಗ್ರಗಾಮಿಗಳಿಗೆ ಹಣಕಾಸು ನೆರವು ನೀಡುವ ಪ್ರಕರಣ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಒಗ್ಗಟ್ಟನ್ನು ವಿಶ್ವ ಸಂಸ್ಥೆ ಉತ್ತೇಜಿಸುತ್ತದೆ" ಎಂದು ಬಾನ್-ಕಿ-ಮೂನ್ ಅವರ ವಕ್ತಾರ ಫರ್ಹಾನ್ ಹಕ್ ತಿಳಿಸಿದ್ದಾರೆ.
ಭಯೋತ್ಪಾದನೆ ವಿಷಯದಲ್ಲಿ  ವಿಶ್ವ ಸಂಸ್ಥೆಯ ನಡೆ ಬಗ್ಗೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೇಳಿದ ಪತ್ರಕರ್ತರಿಗೆ ಉತ್ತರಿಸಿರುವ ಬಾನ್-ಕಿ-ಮೂನ್ ಅವರ ವಕ್ತಾರ, ಜಗತ್ತಿನಾದ್ಯಂತ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಖಂಡಿತವಾಗಿಯೂ ವಿಶ್ವ ಸಂಸ್ಥೆ ಜವಾಬ್ದಾರಿಯುತವಾಗಿ ಯತ್ನಿಸುತ್ತಿದೆ ಎಂದಿದ್ದಾರೆ.
ಬ್ರಸೆಲ್ಸ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಉಇಗ್ರವಾದವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ವಿಫಲವಾಗುತ್ತಿದೆ. ಪರಿಣಾಮ ಬದಲಾಗುತ್ತಿರುವ ಸಮಸ್ಯೆಗಳನ್ನು   ಎದುರಿಸಲು ಸಾಧ್ಯವಾಗದೇ ವಿಶ್ವ ಸಂಸ್ಥೆ ಅಪ್ರಸ್ತುತವಾಗುವ ಅಪಾಯಕ್ಕೂ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.