ಬೋಟ್ ಬ್ಲಾಸ್ಟ್‌ನಲ್ಲಿ ಪವಾಡಸದೃಶ ಪಾರಾದ ಮಾಲ್ಡೀವ್ಸ್ ಅಧ್ಯಕ್ಷ ಗಯೂಮ್
ಪವಿತ್ರ ಹಜ್ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಸೌದಿ ಅರೇಬಿಯ ಭೇಟಿಯನ್ನು ಮುಗಿಸಿ ಮರಳುತ್ತಿದ್ದ ಮಾಲ್ದೀವ್ ಅಧ್ಯಕ್ಷ ಯಮೀನ್ ಅಬ್ದುಲ್...

Published On :
ಮಾಲೆ/ಹೊಸದಿಲ್ಲಿ: ಪವಿತ್ರ ಹಜ್ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಸೌದಿ ಅರೇಬಿಯ ಭೇಟಿಯನ್ನು ಮುಗಿಸಿ ಮರಳುತ್ತಿದ್ದ ಮಾಲ್ದೀವ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್ ಮತ್ತು ಅವರ ಪತ್ನಿ ಫಾತಿಮಾ ಇಬ್ರಾಹಿಂ ಅವರು ಪಯಣಿಸುತ್ತಿದ್ದ ಸ್ಪೀಡ್ ಬೋಟ್‌ನಲ್ಲಿ ಸ್ಫೋಟ ಸಂಭವಿಸಿದ್ದು, ಅದೃಷ್ಟವಶಾತ್ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೋಟ್ ದುರಂತದಲ್ಲಿ ಅಧ್ಯಕ್ಷ ಅಬ್ದುಲ್ ಗಯೂಮ್ ಅವರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಫಾತಿಮಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಲ್ದೀವ್ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ್ಕೆ ಕಾರಣವೆನೆಂಬುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ ಬೋಟ್‌ನ ಇಂಜಿನ್ ರೂಮ್‌ನಲ್ಲಿ ಉಂಟಾಗಿರಬಹುದಾದ ತಾಂತ್ರಿಕ ದೋಷಗಳಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ.
ಅಧ್ಯಕ್ಷರು ಹಾಗೂ ಅವರ ಪತ್ನಿ ಸಂಚರಿಸುತ್ತಿದ್ದ ಬೋಟ್‌ನಲ್ಲಿ ಸ್ಫೋಟ ಸಂಭವಿಸಿದೊಡನೆಯೇ ಅವರನ್ನು ಬೆಂಗಾವಲಲ್ಲಿದ್ದ ಪೊಲೀಸ್ ಸ್ಪೀಡ್ ಬೋಟ್‌ಗೆ ವರ್ಗಾಯಿಸಿ ಪಾರುಗೊಳಿಸಲಾಯಿತು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


