ಆಫ್ಘಾನಿಸ್ಥಾನದಲ್ಲಿ ಹೊಸ ಪೋಲಿಯೋ ಪ್ರಕರಣ ಪತ್ತೆ
ಆಫ್ಘಾನಿಸ್ಥಾನದ ನಾಂಗರ್ಹರ್ ಪ್ರಾಂತ್ಯದಲ್ಲಿ ಮೂರು ಹೊಸ ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವುದನ್ನು ನಾಗರಿಕ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾಬುಲ್: ಆಫ್ಘಾನಿಸ್ಥಾನದ ನಾಂಗರ್ಹರ್ ಪ್ರಾಂತ್ಯದಲ್ಲಿ ಮೂರು ಹೊಸ ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವುದನ್ನು ನಾಗರಿಕ ಆರೋಗ್ಯ ಸಚಿವಾಲಯ ತಿಳಿಸಿದೆ.
ಅಚಿನ್ ಮತ್ತು ಶೀರ್ಜಾದ್ ಜಿಲ್ಲೆಗಳಲ್ಲಿ ಮೂರು ಪೋಲಿಯೋ ಪ್ರಕರಣಗಳು ಪತ್ತೆಯಾಗಿರುವುದಾಗಿ ಸಚಿವಾಲಯದ ವಕ್ತಾರ ವಾಹಿದುಲ್ಲ ಮಾಯರ್ ಹೇಳಿದ್ದಾರೆ ಎಂದು ಖಾಮ ಪ್ರೆಸ್ ವರದಿ ಮಾಡಿದೆ.
ಜಾಗತಿಕವಾಗಿ ಉಳಿದೆಲ್ಲಾ ದೇಶಗಳಲ್ಲಿ ಪೋಲಿಯೋ ನಿರ್ಮೂಲನೆಯಾಗಿದ್ದರೂ ಪಾಕಿಸ್ತಾನ ಮತ್ತು ಆಪ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಪೋಲಿಯೋ ಇನ್ನು ಉಳಿದುಕೊಂಡಿದೆ.
ಈ ರೋಗ ಹೆಚ್ಚು ಮಕ್ಕಳಿಗೆ ತಗಲದಂತೆ ತಡೆಯಲು ಆಫ್ಘಾನಿಸ್ಥಾನದ ಗಡಿಗಳಲ್ಲಿ ಆರೋಗ್ಯ ಕಾರ್ಯಕರ್ತರು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಜನರು ಸಾಮಾನ್ಯವಾಗಿ ಗಡಿಗಳ ಚೆಕ್ ಪೋಸ್ಟ್ ನಲ್ಲಿ ದಾಟದೆ ಬೇರೆಯ ಸರಳ ಮಾರ್ಗಗಳನ್ನು ಅರಸಿಕೊಳ್ಳುವುದು ತೊಡಕಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


