ಹಜ್ ಕಾಲ್ತುಳಿಕ್ಕೆ ಸೌದಿ ರಾಜಕುಮಾರ ಕಾರಣ?
700 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಹಜ್ ಕಾಲ್ತುಳಿತದ ದುರಂತಕ್ಕೆ ಸೌದಿ ರಾಜಕುಮಾರ ಸಲ್ಮಾನ್ ಅಲಿಯಾಸ್ ಅಬ್ದಾಲುಜಿಜ್ ಕಾರಣ ಎಂದು ಅಲ್ಲಿನ ಪತ್ರಿಕೆಯೊಂದು ...

ಮಿನಾ: 700 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಹಜ್ ಕಾಲ್ತುಳಿತದ ದುರಂತಕ್ಕೆ ಸೌದಿ ರಾಜಕುಮಾರ ಸಲ್ಮಾನ್ ಅಲಿಯಾಸ್ ಅಬ್ದಾಲುಜಿಜ್ ಕಾರಣ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿದೆ. ಹಜ್ ಕಾಲ್ತುಳಿತದಲ್ಲಿ ಸೌದಿ ದೊರೆ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಹೇಳಿದೆ.
ಸೌದಿ ಅರೇಬಿಯಾ ರಾಜ ಸಲ್ಮಾನ್ ಗುರುವಾರ ಬೆಳಗ್ಗೆ ಬಿಗಿ ಭದ್ರತೆಯಲ್ಲಿ ಮೆಕ್ಕಾದಿಂದ 5 ಕಿಮೀ ದೂರದಲ್ಲಿರುವ ಮೀನಾ ಎಂಬ ಪ್ರದೇಶಕ್ಕೆ ಆಗಮಿಸಿದರು. ಈ ವೇಳೆ ರಾಜನ ಪ್ರಯಾಣಕ್ಕೆ ಅನುವು ಮಾಡಿಕೊಳ್ಳಲು ಭಕ್ತರು ಸಾಗುತ್ತಿದ್ದ ರಸ್ತೆಯನ್ನು ಬದಲಾಯಿಸಿದ್ದರಿಂದ ಕಾಲ್ತುಳಿತ ಉಂಟಾಗಲು ಕಾರಣವಾಯ್ತ ಎಂದು ಪತ್ರಿಕೆ ತಿಳಿಸಿದೆ. ಆದರೆ ಪ್ರಕರಣ ಹಿಂದಿನ ಕಾರಣವನ್ನು ಮುಚ್ಚಿ ಹಾಕಲು ಸೌದಿ ಪ್ರಾಧಿಕಾರ ಬೇರೆಯದೆ ಕಥೆ ಕಟ್ಟುತ್ತಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಇನ್ನು ಈ ವರದಿಯನ್ನು ಸೌದಿ ಅರೇಬಿಯಾ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಶೀಘ್ರವೇ ಪ್ರಕರಣ ಸಂಬಂಧ ತನಿಖಾ ವರದಿ ತರಿಸಿಕೊಳ್ಳಲಾಗುವುದು ಎಂದು ಸೌದಿ ಆರೋಗ್ಯ ಸಚಿವ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


