ದಾಳಿಗೆ ಮುನ್ನ ಸಾವಿನ ಭಯದಿಂದ ಕಣ್ಣೀರಿಟ್ಟ ಆತ್ಮಾಹತ್ಯಾ ಬಾಂಬರ್!
ಉಜ್ಬೇಕಿಸ್ತಾನ ಮೂಲದ ಜಾಫರ್ ಎಂಬ ಯುವಕ ಬಾಂಬ್ ಸಜ್ಜಿತ ವಾಹನದಲ್ಲಿ ಕುಳಿತು ಆತ್ಮಹತ್ಯಾ ದಾಳಿ ಮಾಡುವ ಮುನ್ನ ಕಣ್ಣೀರಿಡುತ್ತಿರುವ ದೃಶ್ಯ...

Published On :
ಡಮಾಸ್ಕಸ್: ಅದೆಷ್ಟೇ ದೊಡ್ಡ ಉಗ್ರನೇ ಆಗಿರಲಿ ಅವನಿಗೂ ಸಾವಿನ ಭಯ ಇದ್ದೇ ಇರುತ್ತದೆ. ಮರಣ ಭಯಕ್ಕೆ ಹೆದರಿ ಕಣ್ಣೀರಿಡುವಾಗ ಯಾವುದೇ ಜಿಹಾದಿಯೂ ಸಾಧಾರಣ ಮನುಷ್ಯನಾಗಿ ಬಿಡುತ್ತಾನೆ. ಸಿರಿಯಾದಲ್ಲಿ ಹದಿಹರೆಯದ ಆತ್ಮಹತ್ಯಾ ಬಾಂಬರ್, ಮರಣ ಭಯದಿಂದ ಕಣ್ಣೀರಿಡುತ್ತಿರುವ ವೀಡಿಯೋ ಈಗ ವಿಶ್ವದಲ್ಲಿ ಚರ್ಚೆಗಾಸ್ಪದವಾಗಿದೆ.
ಉಜ್ಬೇಕಿಸ್ತಾನ ಮೂಲದ ಜಾಫರ್ ಅಲ್ ತಯ್ಯರ್ ಎಂಬ ಯುವಕ ಬಾಂಬ್ ಸಜ್ಜಿತ ವಾಹನದಲ್ಲಿ ಕುಳಿತು ಆತ್ಮಹತ್ಯಾ ದಾಳಿ ಮಾಡುವ ಮುನ್ನ ಕಣ್ಣೀರಿಡುತ್ತಿರುವ ದೃಶ್ಯ ಈ ವೀಡಿಯೋದಲ್ಲಿದೆ. ಬಾಂಬ್‌ಗಳಿರುವ ಆ ವಾಹನದಲ್ಲಿ ಸಿರಿಯಾದ ಗ್ರಾಮವೊಂದಕ್ಕೆ ಹೋಗಿ ಅಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟ ಮಾಡಲು ಜಾಫರ್‌ನ್ನು ನಿಯೋಜಿಸಲಾಗಿತ್ತು. ಆದರೆ ವಾಹನವನ್ನೇರುವ ಮುನ್ನ ಜಾಫರ್ ಹೆದರಿಕೆಯಿಂದ ಅಳುತ್ತಾ ನಿಂತಿರುತ್ತಾನೆ. ಅವನಿಗೆ ಇತರ ಉಗ್ರರು ಧೈರ್ಯ ತುಂಬಿ ಮುನ್ನುಗ್ಗುವಂತೆ ಪ್ರೇರೇಪಿಸುತ್ತಾರೆ. ಕಣ್ಣೀರಿಡುತ್ತಾ ವಾಹನವನ್ನೇರಿ ಹೋಗುವ ಜಾಫರ್ ಕೆಲವೇ ಕ್ಷಣದಲ್ಲಿ ಆತ್ಮಹತ್ಯಾ ದಾಳಿ ನಡೆಸುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


