ವಿದೇಶ

ರಜಾ ದಿನಗಳಂದು ಪವಿತ್ರ ಸ್ಥಳದಲ್ಲಿ ಮುಸ್ಲಿಮೇತರರ ಪ್ರಾರ್ಥನೆಗೆ ಇಸ್ರೇಲ್ ನಿಷೇಧ

ಜೆರುಸೇಲಮ್ ನ ಸೂಕ್ಷ್ಮ ಪವಿತ್ರ ಸ್ಥಳವನ್ನು ಪ್ರಮುಖ ಮುಸ್ಲಿಂ ರಜಾ ದಿನಗಳಂದು ಮುಸ್ಲಿಮೇತರರು ಪ್ರವೇಶಿಸದಂತೆ ಇಸ್ರೇಲಿ ಪೊಲೀಸರು ನಿಷೇಧ ಹೇರಿದ್ದಾರೆ.

ರಜಾ ದಿನಗಳಂದು ಪವಿತ್ರ ಸ್ಥಳದಲ್ಲಿ ಮುಸ್ಲಿಮೇತರರ ಪ್ರಾರ್ಥನೆಗೆ ಇಸ್ರೇಲ್ ನಿಷೇಧ
ಜೆರುಸೇಲಮ್ ನ ವಿವಾದಾತ್ಮಕ ಪವಿತ್ರ ಸ್ಥಳ
Published On :

ಜೆರುಸೇಲಮ್: ಜೆರುಸೇಲಮ್ ನ ಸೂಕ್ಷ್ಮ ಪವಿತ್ರ ಸ್ಥಳವನ್ನು ಪ್ರಮುಖ ಮುಸ್ಲಿಂ ರಜಾ ದಿನಗಳಂದು ಮುಸ್ಲಿಮೇತರರು ಪ್ರವೇಶಿಸದಂತೆ ಇಸ್ರೇಲಿ ಪೊಲೀಸರು ನಿಷೇಧ ಹೇರಿದ್ದಾರೆ.

ಈದ್ ಅಲ್-ಅಧ ಸಂಭ್ರಮಾಚರಣೆಗಳಿಗಾಗಿ ಅಲ್-ಅಕ್ವ್ಸಾ ಮಸೀದಿಯ ಆವರಣದಲ್ಲಿ ಮುಸ್ಲಿಂ ಪ್ರಾರ್ಥನೆಗಾಗಿ ಯಾವುದೇ ನಿರ್ಬಂಧವಿಲ್ಲದೆ ಪೊಲೀಸರು ಅವಕಾಶ ನೀಡಿದ್ದು ಇನ್ನುಳಿದವರನ್ನು ಅಲ್ಲಿಗೆ ಪ್ರವೇಶಿಸುವುದರಿಂದ ನಿಷೇಧಿಸಿದ್ದೇವೆ ಎಂದು ವಕ್ತಾರ ಮಿಕಿ ರಾಸನ್ಫ್ಲೆಡ್ ತಿಳಿಸಿದ್ದಾರೆ.

ಜ್ಯೂ ಧರ್ಮೀಯರಿಗೆ ಮೌಂಟ್ ದೇವಾಲಯವೆಂದು ಹಾಗೂ ಮುಸ್ಲಿಮರಿಗೆ ನೋಬಲ್ ಸ್ಯಾಂಕ್ಚುರಿಯೆಂದು ಜನಜನಿತವಾಗಿರುವ ಈ ಪವಿತ್ರ ಸ್ಥಳ ಇತ್ತೀಚಿನ ದಿನಗಳಲ್ಲಿ ಹಿಂಸೆಯ ಮೂಲವಾಗಿತ್ತು.

ಇಸ್ರೇಲ್ ಜ್ಯೂ ಧರ್ಮೀಯರು ಈ ಸ್ಥಳಕ್ಕೆ ಭೇಟಿ ನೀಡುವಾಗ ಮುಸ್ಲಿಮರಿಗೆ ಪ್ರವೇಶ ನಿಷೇಧಿಸುವುದನ್ನು ಪ್ಯಾಲೆಸ್ಟೇನಿಯನ್ನರು ವಿರೋಧಿಸಿದ್ದರು.

ಜ್ಯೂಯಿಶ್ ಹೊಸ ವರ್ಷದ ಸಂಭ್ರಾಚರಣೆಗಳ ಸಮಯದಲ್ಲಿ ಪ್ಯಾಲೆಸ್ಟೇನಿಯನ್ನರು ಈ ಮಸೀದಿಗೆ ತಡೆಗೋಡೆ ಕಟ್ಟಿ ಪೋಲೀಸರ ಮೇಲೆ ಕಲ್ಲುಗಳು ಮತ್ತು ಪಟಾಕಿಗಳನ್ನು ಎಸೆದಿದ್ದಕ್ಕೆ ಹಿಂಸಾಚಾರ ಭುಗಿಲೆದ್ದಿತ್ತು. ಆ ಸಮಯದಲ್ಲಿ ಒಬ್ಬ ಇಸ್ರೇಲಿ ಮನುಷ್ಯ ಮೃತಪಟ್ಟಿದ್ದ ಕೂಡ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.