ವಿದೇಶ

ನೇಪಾಳ ಹಿಂದೂ ರಾಷ್ಟ್ರ ಪ್ರಸ್ತಾವನೆ ತಿರಸ್ಕಾರ

ಹಿಮಾಲಯ ದೇಶ ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವ ಪ್ರಸ್ತಾವನೆಯನ್ನು ನೇಪಾಳ ಸಂಸದರು ತಿರಸ್ಕರಿಸಿದ್ದಾರೆ. ಏಳು ವರ್ಷಗಳ ಹಿಂದೆ

ನೇಪಾಳ ಹಿಂದೂ ರಾಷ್ಟ್ರ ಪ್ರಸ್ತಾವನೆ ತಿರಸ್ಕಾರ
ನೇಪಾಳದ ಪಶುಪತೀಶನಾಥ ದೇವಸ್ಥಾನ
Published On :

ಖಟ್ಮಂಡು: ಹಿಮಾಲಯ ದೇಶ ನೇಪಾಳವನ್ನು ಹಿಂದೂ ರಾಷ್ಟ್ರವಾಗಿ ಘೋಷಿಸುವ ಪ್ರಸ್ತಾವನೆಯನ್ನು ನೇಪಾಳ ಸಂಸದರು ತಿರಸ್ಕರಿಸಿದ್ದಾರೆ. ಏಳು ವರ್ಷಗಳ ಹಿಂದೆ ಜಾತ್ಯಾತೀತತೆಯನ್ನು ಒಪ್ಪಿಕೊಂಡಿದ್ದ ತತ್ವವನ್ನು ವಿಧಾನಸಭೆ ಪುರಸ್ಕರಿಸಿದೆ.

೬೦೧ ಸದಸ್ಯರ ವಿಧಾನ ಸಭೆ, ದೇಶದ ಹೊಸ ಸಂವಿಧಾನದ ಮಾರ್ಗಸೂಚಿ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಒಂದು ಕಾಲದ ಹಿಂದು ದೇಶ, ಆದರೆ ಮೇ ೨೦೦೮ ರಲ್ಲಿ ಅಪ್ಪಿಕೊಂಡಿದ್ದ ಜಾತ್ಯಾತೀತತೆಯನ್ನು ಎತ್ತಿಹಿಡಿಯಿತು ಎಂದು ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

ರಾಜವಂಶಸ್ಥರ ಆಳ್ವಿಕೆ ಪರವಾಗಿರುವ ರಾಷ್ಟ್ರೀಯ ಪ್ರಜಾಸ್ಥಾನ ಪಕ್ಷದ ಮುಖಂಡ ಕಮಲ್ ಥಾಪ ಮತ್ತು ಅಮೃತ್ ಬೋಹೋರಾ ಸಂವಿಧಾನದಿಂದ ಜಾತ್ಯಾತೀತವಾದ ಪದವನ್ನು ತೆಗೆದುಹಾಕಿ ಹಿಂದೂ ರಾಷ್ಟ್ರ ಎಂದು ಘೋಷಿಸುವಂತೆ ಪಟ್ಟುಹಿಡಿದಿದ್ದರು.

ಆದರೆ ವಿಧಾನಸಭಾ ಅಧ್ಯಕ್ಷ ಸುಭಾಶ್ ಚಂದ್ರ ನೆಂಬಾಂಗ್ ಇದನ್ನು ತಿರಸ್ಕರಿಸಿದ್ದಕ್ಕೆ ಕಮಲ್ ಥಾಪಾ ಮತದಾನಕ್ಕೆ ಆಗ್ರಹಿಸಿದ್ದರು.

ಇದನು ಮತದಾನಕ್ಕೆ ಹಾಕುವ ಪ್ರಸ್ತಾವನೆಗೆ ಕೇವಲ ೨೧ ಸದಸ್ಯರು ಮಾತ್ರ ಆಸಕ್ತಿ ತೋರಿದ್ದರಿಂದ ಮತದಾನದ ಪ್ರಸ್ತಾವನೆಯನ್ನೂ ತಿರಸ್ಕರಿಸಲಾಯಿತು. ಮತದಾನದ ಪ್ರಸ್ತಾವನೆಗೆ ೬೦೧ ಜನರಲ್ಲಿ ಕನಿಷ್ಠ ೬೧ ಸದಸ್ಯರ ಸಹಕಾರ ಅಗತ್ಯವಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.