ಪಾಕಿಸ್ತಾನ- ಚೀನಾ ಫ್ರೆಂಡ್ ಶಿಪ್ ಟನಲ್ ಉದ್ಘಾಟಿಸಿದ ನವಾಜ್ ಷರೀಫ್
ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನ-ಚೀನಾ ಫ್ರೆಂಡ್ ಶಿಪ್ ಟನಲ್ ನ್ನು ಉದ್ಘಾಟನೆ ಮಾಡಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನ- ಚೀನಾ ಫ್ರೆಂಡ್ ಶಿಪ್ ಟನಲ್ ಉದ್ಘಾಟಿಸಿದ ನವಾಜ್ ಷರೀಫ್ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪಾಕಿಸ್ತಾನ-ಚೀನಾ ಫ್ರೆಂಡ್ ಶಿಪ್ ಟನಲ್ ನ್ನು ಉದ್ಘಾಟನೆ ಮಾಡಿದ್ದಾರೆ.
ಗಿಲ್ಗಿಟ್-ಬಾಲ್ಟಿಸ್ತಾನ್ ರಲ್ಲಿರುವ ಅಟ್ಟಾಬಾದ್ ನದಿಯ ಮೇಲೆ ಚೀನಾ ಟನಲ್ ನ್ನು ನಿರ್ಮಿಸಿದೆ. 2010 ರಲ್ಲಿ ಅಟ್ಟಾಬಾದ್ ನಲ್ಲಿ ಉಂಟಾಗಿದ್ದ ಭೂಕುಸಿತದಿಂದಾಗಿ ನಾಶವಾಗಿದ್ದ ಕಾರಕೋರಂ ಹೆದ್ದಾರಿಯ ಐದು ಟನಲ್ ನ್ನು ಟನಲ್ ನ್ನು ಪುನರ್ನಿಮಿಸಲಾಗಿದೆ.
ಇದೇ ಹೆದ್ದಾರಿಯಲ್ಲಿರುವ ಎರಡು ಮುಖ್ಯ ಸೇತುವೆ ಹಾಗೂ 78 ಸಣ್ಣ ಸೇತುವೆಗಳನ್ನು ಸಹ ಪುನರ್ನಿಮಿಸಲಾಗಿದೆ. ಟನಲ್ ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಚೀನಾ ರಸ್ತೆ, ಮೇಲ್ಸೇತುವೆ ಕಾರ್ಪೊರೇಷನ್ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಮೂರು ವರ್ಷ ಎರಡು ತಿಂಗಳಲ್ಲಿ ಯೋಜನೆಯನ್ನು ಚೀನಾ ಸಹಯೋಗದಲ್ಲಿ ಪೂರ್ಣಗೊಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


